ಬೆಂಗಳೂರು: ರಾಜ್ಯದಲ್ಲಿ ಚಳಿಗಾಲ ಮುಗಿದು ಬೇಸಿಗೆಗಾಲ ಶುರುವಾಗಿದೆ. ಅತ್ತ ಜನರೂ ಕೂಡಾ ಚಳಿ ಚಳಿ ಅಂತಿದ್ದವರೂ, ಇದೀಗ ಏನಪ್ಪಾ ಇಷ್ಟೊಂದು ಸೆಖೆ ಅಂತಿದ್ದಾರೆ. ಕೆಲ ಜಿಲ್ಲೆಗಳಲ್ಲಂತೂ ಹೊರಗೆ ಕಾಲಿಡದ ಪರಿಸ್ಥಿತಿ ಎದುರಾಗಿದೆ. ಇದೀಗ ಮಕ್ಕಳು ಬಿಸಿಲು ಸಂಬಂಧಿತ ಅನಾರೋಗ್ಯಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ.
ಕ್ಯಾಂಡಿಡಾ, ಫಂಗಲ್, ವೈರಲ್ ಮತ್ತು ಚರ್ಮದ ಸೋಂಕುಗಳು ಹೆಚ್ಚಾಗುತ್ತಿವೆ. ಹೆಚ್ಚು ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಮತ್ತು ಬಿಸಿಲಿನಿಂದ ರಕ್ಷಿಸಿಕೊಳ್ಳುವುದು ಮುಖ್ಯ. ಪೋಷಕರು ಎಚ್ಚರಿಕೆಯಿಂದಿರುವಂತೆ ವೈದ್ಯರ ಸಲಹೆಯಾಗಿದೆ.
ಬೇಸಿಗೆ ಜೊತೆಗೆ ಮಕ್ಕಳಲ್ಲಿ ನಾನಾ ಇನ್ಫೆಕ್ಷನ್ಗಳು ಶುರುವಾಗಿದೆ. ಕ್ಯಾಂಡಿಡಾ ಇನ್ಫೆಕ್ಷನ್, ಫಂಗಲ್ ಇನ್ಫೆಕ್ಷನ್, ವೈರಲ್ ಇನ್ಫೆಕ್ಷನ್, ಸ್ಕಿನ್ ಇನ್ಫೆಕ್ಷನ್, ಡೈಯೆರಿಯಾ ಸೇರಿದಂತೆ ನಾನಾ ಆರೋಗ್ಯದ ಸಮಸ್ಯೆಗಳು ಕಂಡು ಬರುತ್ತಿವೆ. ಫಂಗಲ್, ವೈರಲ್, ಸ್ಕಿನ್ ಇನ್ಫೆಕ್ಷನ್ ಜೊತೆಗೆ ಡೈಯೆರಿಯಾ ಶುರುವಾಗಿದೆ. ಹೀಗಾಗಿ ವೈದ್ಯರು ಮಕ್ಕಳ ಆರೋಗ್ಯದ ಬಗ್ಗೆ ಕೊಂಚ ಎಚ್ಚರವಹಿಸುವಂತೆ ಪೋಷಕರಿಗೆ ಸಲಹೆ ನೀಡುತ್ತಿದ್ದಾರೆ.