ಬೆಂಗಳೂರು:- ಬೆಂಗಳೂರು ಟೆಕ್ಕಿ ಸಾವು ಪ್ರಕರಣ ದೇಶದಾದ್ಯಂತ ಸದ್ದು ಮಾಡುತ್ತಿದೆ. ಸಾಯೋ ಮುನ್ನ ಅವರು ಬರೆದ ಡೆತ್ ನೋಟ್, ಹಾಗೂ ತನ್ನ ಪತ್ನಿಯ ಬಗ್ಗೆ ಹೇಳಿದ ಅಷ್ಟು ಆರೋಪಗಳ ತನಿಖೆಯಲ್ಲಿ ಪೊಲೀಸರು ಮುಂದಾಗಿದ್ದಾರೆ.
ಎಸ್, ಟೆಕ್ಕಿ ಅತುಲ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮಾರತ್ತಹಳ್ಳಿ ಪೊಲೀಸರು ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಆರೋಪಿಗಳಿಗಾಗಿ ಉತ್ತರ ಪ್ರದೇಶದಲ್ಲಿ ಬೀಡುಬಿಟ್ಟಿದ್ದು, ತೀವ್ರ ಶೋಧ ನಡೆಸುತ್ತಿದ್ದಾರೆ.
ಅತುಲ್, ಡೆತ್ ನೋಟ್ನಲ್ಲಿ ನನ್ನ ಸಾವಿಗೆ ನನ್ನ ಪತ್ನಿ ನಿಖಿತಾ ಹಾಗೂ ಆಕೆಯ ತಾಯಿ, ಸಹೋದರನ ಮೇಲೆ ಆರೋಪ ಮಾಡಿ ಡೆತ್ ನೋಟ್ ಬರೆದಿಟ್ಟು ಸೂಸೈಡ್ ಮಾಡಿಕೊಂಡಿದ್ದರು. ಟೆಕ್ಕಿ ಅತುಲ್ ಸಾವಿಗೆ ಕಾರಣವಾಗಿರೋ ಆರೋಪ ಎದುರಿಸುತ್ತಿರೋ ಆರೋಪಿಗಳನ್ನು ಮಾರತ್ತಹಳ್ಳಿ ಪೊಲೀಸರು ಉತ್ತರ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದು, ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ. ಇನ್ನು ಪ್ರಕರಣ ಪ್ರಮುಖ ಆರೋಪಿಯಾಗಿರುವ ಮೃತ ಅತುಲ್ ಪತ್ನಿ ನಿಖಿತಾ ಬೆಂಗಳೂರು ಪೊಲೀಸರು ಉತ್ತರ ಪ್ರದೇಶಕ್ಕೆ ಬಂದಿರುವ ವಿಚಾರ ತಿಳಿದು ಊರು ಬಿಟ್ಟು ಹೋಗಿದ್ದಾಳೆ. ಆರೋಪಿ
ನಿಖಿತಾ ಅವರಿಗೆ ಫೋನ್ ಮೂಲಕ ಸಂಪರ್ಕ ಮಾಡಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗದೇ ನಿಖಿತಾ ಮೊಬೈಲ್ ಸ್ವೀಚ್ಆಫ್ ಮಾಡಿಕೊಂಡು ಹೋಗಿದ್ದಾರೆ.
ಹಾಗಾಗಿ ಮಾರತ್ತಹಳ್ಳಿ ಪೊಲೀಸರು ಸ್ಥಳೀಯ ಪೊಲೀಸರ ಸಹಾಯ ಪಡೆದು ಉತ್ತರ ಪ್ರದೇಶದಲ್ಲಿರುವ ಆರೋಪಿ ನಿಖಿತಾ ಮನೆಗೆ ಹೋಗಿ ನೋಟಿಸ್ ಹಾಗೂ ಎಫ್ಐಆರ್ ಅಂಟಿಸಿ ಬಂದಿದ್ದಾರೆ. ನೋಟಿಸ್ನಲ್ಲಿ ಮುಂದಿನ ಮೂರು ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಒಂದು ವೇಳೆ ಬರದಿದ್ದರೆ ಅರೆಸ್ಟ್ ಹಾಗೋ ಎಲ್ಲಾ ಸಾಧ್ಯತೆ ಇದೆ ಎನ್ನಲಾಗಿದೆ.