ಮಂಡ್ಯ: ತಮ್ಮ ನೆಚ್ಚಿನ ಶಿಕ್ಷಕಿ ವರ್ಗಾವಣೆಗೊಂಡು ಮತ್ತೊಂದು ಶಾಲೆಗೆ ತೆರಳುತ್ತಿರುವ ಸಂದರ್ಭದಲ್ಲಿ ಶಾಲಾ ಮಕ್ಕಳು ಗಳಗಳನೆ ಕಣ್ಣೀರಿಟ್ಟಿದ್ದಾರೆ ಮಂಡ್ಯದ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಈ ಮನಕಲಕುವ ಘಟನೆ ನಡೆದಿದ್ದು, ಮಕ್ಕಳು ಕಣ್ಣೀರಿಟ್ಟುತಮ್ಮ ಶಿಕ್ಷಕಿಯನ್ನ ಬೀಳ್ಕೊಟ್ಟಿದ್ದಾರೆ.
ವರ್ಗಾವಣೆ ವಿಷಯ ತಿಳಿದು ವಿದ್ಯಾರ್ಥಿಗಳು, ನೀವೂ ಎಲ್ಲಿಯೂ ಹೋಗಬೇಡಿ ಎಂದು ಕಣ್ಣೀರು ಹಾಕಿದ್ದಾರೆ.ಮಕ್ಕಳ ಜೊತೆ ಶಿಕ್ಷಕಿ ಸವಿತಾ ಅನ್ಯೋನ್ಯವಾಗಿರುತ್ತಿದ್ದರು. ಹೀಗಾಗಿ ಶಾಲೆ ಬಿಟ್ಟು ಹೊರಡುವ ವೇಳೆ ಮಕ್ಕಳು ಅವರನ್ನು ಸುತ್ತುವರಿದು ಭಾವುಕರಾಗಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಶಿಕ್ಷಕಿ ಅವರನ್ನು ವಿದ್ಯಾರ್ಥಿಗಳು ತಡೆದಿದ್ದರು.
