ಮುಂಬೈ: ತಾಂಜೇನಿಯಾದ ಹುಡುಗ ಕಿಲಿ ಪೌಲ್ ಜನಪ್ರಿಯ ಬಾಲಿವುಡ್ ಹಾಡುಗಳಿಗೆ ಲಿಪ್-ಸಿಂಕ್ ಮಾಡುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಈಗ ಕಿಲಿಯು ಹೊಸ ವೀಡಿಯೋದೊಂದಿಗೆ ಮತ್ತೆ ಮರಳಿದ್ದಾನೆ. ಈ ಬಾರಿ ಅವನು ಬಾಲಿವುಡ್ ನಟಿ ನೋರಾ ಫತೇಹಿ ಅವರ ಇತ್ತೀಚೆಗೆ ಬಿಡುಗಡೆಯಾದ ಡ್ಯಾನ್ಸ್ ಮೇರಿ ರಾಣಿ ಹಾಡಿಗೆ ನೃತ್ಯ ಮಾಡಿದ್ದಾನೆ.
ಈ ವೈರಲ್ ವೀಡಿಯೋದಲ್ಲಿ ಕಿಲಿ ಪಾಲ್ ಡ್ಯಾನ್ಸ್ ಮೇರಿ ರಾಣಿ ಹಾಡಿನಲ್ಲಿರುವ ಹುಕ್ ಸ್ಟೆಪ್ಸ್ಗಳನ್ನು ಹಾಕುತ್ತಿದ್ದು, ತನ್ನ ಅಮೋಘ ನೃತ್ಯದ ಮೂಲಕ ಈಗಾಗಲೇ ಸಾಕಷ್ಟು ನೆಟ್ಟಿಗರ ಗಮನ ಸೆಳೆದಿದ್ದಾನೆ. ಕಿಲಿಯು ಈಗಾಗಲೇ ತನ್ನ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೋವನ್ನು ಹರಿಬಿಟ್ಟಿದ್ದು, ವೈರಲ್ ಆದ ಈ ವೀಡಿಯೋವು ನೆಟ್ಟಿಗರಿಂದ 60 ಲಕ್ಷ ವಿಕ್ಷಣೆಗಳನ್ನು ಪಡೆದಿದೆ.

ನಾನು ನೋರಾ ಅವರು ಈ ಹಾಡಿನಲ್ಲಿ ಯಾವ ರೀತಿ ಹೆಜ್ಜೆ ಹಾಕಿದ್ದಾರೋ ಅದೇ ರೀತಿ ನೃತ್ಯ ಮಾಡಲು ಪ್ರಯತ್ನಿಸಿದ್ದೇನೆ ಎಂದು ವೀಡಿಯೋಗೆ ಶೀರ್ಷಿಕೆ ನೀಡಿದ್ದಾನೆ. ಕಿಲಿಯ ಈ ಅಮೋಘ ನೃತ್ಯವನ್ನು ವಿಕ್ಷಿಸಿದ ನೋರಾ ಬಹಳ ಪ್ರಭಾವಿತಳಾಗಿದ್ದು, ಅವನ ಆಫ್ರೋ ಮತ್ತು ಜಂಕು ಹೆಜ್ಜೆಗಳು ನೋಡಲು ತುಂಬಾ ಅದ್ಬುತವಾಗಿತ್ತು. ಕಿಲಿ ಪೌಲ್ ತಾಂಜೇನೀಯಾದಲ್ಲಿ ‘ಡ್ಯಾನ್ಸ್ ಮೇರಿ ರಾಣಿ’ ಎಂದು ಶಿರ್ಷಿಕೆ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
