ತಮಿಳು ನಟ ಅಶೋಕ್ ಸೆಲ್ವನ್ (Ashok Selvan) ಜೊತೆ ನಟಿ ಕೀರ್ತಿ ಪಾಂಡಿಯನ್ (Keerthi Pandian) ದಾಂಪತ್ಯ (Wedding) ಜೀವನಕ್ಕೆ ಸೆ.13ರಂದು ಕಾಲಿಟ್ಟಿದ್ದಾರೆ.

ಎರಡು ಕುಟುಂಬದ ಸಮ್ಮುಖದಲ್ಲಿ ಇಂದು ತಿರುನೆಲ್ವೇಲಿ ಸಮೀಪದ ಇಟ್ಟೇರಿಯಲ್ಲಿ ಮದುವೆ ಅದ್ದೂರಿಯಾಗಿ ನಡೆದಿದೆ.
ಮದುವೆಯ ಸುಂದರ ಫೋಟೋಗಳನ್ನ ನವಜೋಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಖ್ಯಾತ ನಟ- ನಿರ್ಮಾಪಕ ಅರುಣ್ ಪಾಂಡಿಯನ್ (Arun Pandian) ಪುತ್ರಿ, ಕೀರ್ತಿ ಜೊತೆ ಅಶೋಕ್ ಸೆಲ್ವನ್ ಸೆ.13ರಂದು ಬೆಳಿಗ್ಗೆ 8 ಗಂಟೆಗೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

ಅಮ್ಮಾಳ್ ಫಾರ್ಮ್ನಲ್ಲಿ ಈ ಮದುವೆ ಜರುಗಿದೆ. ಕೀರ್ತಿ-ಅಶೋಕ್ ಲೈಟ್ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ.

