ಬೆಂಗಳೂರು:- ಅಜೇಯವಾಗಿ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ಟೀಂ ಇಂಡಿಯಾಗೆ ವಿರೋಚಿತ ಸೋಲು ಎದುರಾಗಿದೆ.
ಈ ಹಿನ್ನೆಲೆ ಪರಿಷತ್ ಸದಸ್ಯ ಟಿಎ ಶರವಣ ಟ್ವೀಟ್ ಮಾಡಿದ್ದು, ಸೋಲು – ಗೆಲುವು ಕ್ರೀಡೆಯಲ್ಲಿ ಮಾತ್ರವಲ್ಲ, ಜೀವನದಲ್ಲೂ ಸಾಮಾನ್ಯ. ನಮ್ಮವರು ಗೆದ್ದಾಗ ಸಂಭ್ರಮಿಸೋಣ, ಸೋತಾಗ ಮತ್ತೆ ಪುಟ್ಟಿದೇಳುವಂತೆ ಹುರಿದುಂಬಿಸೋಣ.
ಪಂದ್ಯ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆಗಳು. ಅಂತಿಮ ಪಂದ್ಯದಲ್ಲಿ ಎಡವಿದರೂ ವಿಶ್ವಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಹೃದಯ ಗೆದ್ದ ಭಾರತ ತಂಡಕ್ಕೆ ವಿಶೇಷ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ಸೋಲು – ಗೆಲುವು ಕ್ರೀಡೆಯಲ್ಲಿ ಮಾತ್ರವಲ್ಲ, ಜೀವನದಲ್ಲೂ ಸಾಮಾನ್ಯ. ನಮ್ಮವರು ಗೆದ್ದಾಗ ಸಂಭ್ರಮಿಸೋಣ, ಸೋತಾಗ ಮತ್ತೆ ಪುಟ್ಟಿದೇಳುವಂತೆ ಹುರಿದುಂಬಿಸೋಣ.
ಪಂದ್ಯ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆಗಳು. ಅಂತಿಮ ಪಂದ್ಯದಲ್ಲಿ ಎಡವಿದರೂ ವಿಶ್ವಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಹೃದಯ ಗೆದ್ದ ಭಾರತ ತಂಡಕ್ಕೆ ವಿಶೇಷ ಅಭಿನಂದನೆಗಳು. pic.twitter.com/WDe9T8p0cQ
— Sharavana TA (@SharavanaTa) November 19, 2023
ಇನ್ನೂ ಗುಜರಾತ್ನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ 2023ರ ವಿಶ್ವಕಪ್ ಪಂದ್ಯ ದಲ್ಲಿ 6ನೇ ಬಾರಿಗೆ ಆಸ್ಟ್ರೇಲಿಯಾ ತಂಡ ವಿಶ್ವ ಚಾಂಪಿಯನ್ ಆಗಿದೆ. ಆ ಮೂಲಕ ವಿಶ್ವಕಪ್ ಗೆಲ್ಲುವ ಟೀಂ ಇಂಡಿಯಾ ಕನಸು ಭಗ್ನವಾಗಿದೆ. ಅಜೇಯವಾಗಿ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ಟೀಂ ಇಂಡಿಯಾಗೆ ವಿರೋಚಿತ ಸೋಲು ಎದುರಾಗಿದೆ.