ಮೋಹಕ ತಾರೆ ರಮ್ಯಾ (Ramya) ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Muttina Male Haniye) ಟ್ರೈಲರ್ ಇದೀಗ ರಿಲೀಸ್ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ವೊಂದರಲ್ಲಿ ಟ್ರೈಲರ್ ರಿಲೀಸ್ ಸಮಾರಂಭ ನಡೆದಿದೆ. ಚಿತ್ರದ ಟ್ರೈಲರ್ ಭಾವನಾತ್ಮಕವಾಗಿ ಮೂಡಿ ಬಂದಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಅನಿಕೇತ್ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ (Raj B Shetty), ಪ್ರೇರಣಾ ರೋಲ್ನಲ್ಲಿ ಸಿರಿ ರವಿಕುಮಾರ್ (Siri Ravikumar) ಜೀವತುಂಬಿದ್ದು, ಇಡೀ ಟ್ರೈಲರ್ ಎಮೋಷನಲ್ ಆಗಿ ನೋಡುಗರಿಗೆ ಕನೆಕ್ಟ್ ಆಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಅನಿಕೇತ್ಗೆ ಹೆಲ್ತ್ ಕೌನ್ಸಿಲರ್ ಆಗಿ ಪ್ರೇರಣಾ ಜೊತೆಯಾಗುತ್ತಾರೆ. ಕಥೆಯಲ್ಲಿ ಏನಾಗುತ್ತೆ ಎಂಬುದನ್ನ ಸುಳಿವು ಬಿಟ್ಟು ಕೊಡದೇ ಸಿನಿಮಾ ನೋಡುವಂತೆ ಪ್ರೇರಣೆ ನೀಡಿದೆ ಈ ಟ್ರೈಲರ್. ಭಾವನಾತ್ಮಕವಾಗಿ ಪ್ರೇಕ್ಷಕರನ್ನ ಸೆಳೆಯುತ್ತಿದೆ ಈ ಟ್ರೈಲರ್.
ರಿಲೀಸ್ ಆಗಿರೋ ಟ್ರೈಲರ್ ನೋಡಿಯೇ ರಾಜ್ ಬಿ ಶೆಟ್ಟಿ, ಸಿರಿ ನಟನೆಗೆ ಫ್ಯಾನ್ಸ್ ಕಡೆಯಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಒಂದೊಳ್ಳೆ ವಿಭಿನ್ನ ಕಥೆಗೆ ನಟಿ ರಮ್ಯಾ ನಿರ್ಮಾಣದ ಮೂಲಕ ಸಾಥ್ ನೀಡಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಇದೇ ನವೆಂಬರ್ 24ಕ್ಕೆ ರಿಲೀಸ್ ಆಗ್ತಿದೆ