ಆನೇಕಲ್:- ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ಪತ್ನಿಯ ಶೀಲ ಶಂಕಿಸಿ ನಡುರಸ್ತೆಯಲ್ಲಿಯೇ ಪತಿ ಚಾಕು ಇರಿದು ಹತ್ಯೆಗೈದಿರುವ ಘಟನೆ ಜರುಗಿದೆ.
ಫೈನಾನ್ಸ್ ಕಿರುಕುಳದ ಸುದ್ದಿ ಬೆನ್ನಲ್ಲೇ ಹೈಕೋರ್ಟ್ ಮೆಟ್ಟಿಲೇರಿದ ಮಲ್ಯ! ಕಾರಣ?
29 ವರ್ಷದ ಶ್ರೀಗಂಗಾ ಹಾಗೂ ಆರೋಪಿಯನ್ನು ಮೋಹನ್ ಎಂದು ಗುರುತಿಸಲಾಗಿದೆ. ಏಳು ವರ್ಷಗಳ ಹಿಂದೆ ಮೃತ ಶ್ರೀಗಂಗಾ ಹಾಗೂ ಮೋಹನ್ ರಾಜು ವಿವಾಹವಾಗಿದ್ದರು. ಜೊತೆಗೆ ಆರು ವರ್ಷದ ಮಗನಿದ್ದ. ಎರಡು ಮೂರು ವರ್ಷಗಳ ಹಿಂದೆ ಮೋಹನ್ ತನ್ನ ಸ್ನೇಹಿತನ ಜೊತೆಗೆ ಪತ್ನಿಯ ಶೀಲ ಶಂಕಿಸಿ ಗಲಾಟೆ ಮಾಡಿದ್ದ. ಈ ವೇಳೆ ಇಬ್ಬರ ನಡುವೆ ಜಗಳವಾಗಿತ್ತು. ಕಳೆದ 8 ತಿಂಗಳ ಹಿಂದೆ ಇಬ್ಬರು ಬೇರ್ಪಟ್ಟಿದ್ದರು
ಮಂಗಳವಾರ ರಾತ್ರಿ ಮೋಹನ್ ಮಗುವನ್ನು ನೋಡಲು ಪತ್ನಿಯ ಮನೆಗೆ ಬಂದಿದ್ದ. ಈ ವೇಳೆ ಇಬ್ಬರ ನಡುವೆ ಜಗಳವಾಗಿತ್ತು. ಬಳಿಕ ಬುಧವಾರ ಬೆಳಗ್ಗೆ ಮಗುವನ್ನು ಶಾಲೆಗೆ ಬಿಡಲು ಶ್ರೀಗಂಗಾ ಬೈಕ್ನಲ್ಲಿ ಬಂದಿದ್ದಳು. ಈ ವೇಳೆ ಕಾದು ಕುಳಿತಿದ್ದ ಮೋಹನ್ ಆಕೆಯ ಮೇಲೆ ಅಟ್ಯಾಕ್ ಮಾಡಿ, 7-8 ಬಾರಿ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿದ್ದಾನೆ.
ಗಂಭೀರ ಗಾಯಗೊಂಡು ಕುಸಿದು ಬಿದ್ದಿದ್ದ ಶ್ರೀಗಂಗಾಳನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರ ಭೇಟಿ ನೀಡಿದ್ದು, ಆರೋಪಿ ಮೋಹನ್ ರಾಜ್ನನ್ನು ವಶಕ್ಕೆ ಪಡೆದಿದ್ದಾರೆ.