2023ರ ವರ್ಷದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ತೋರಿದ ಆಟಗಾರರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪಟ್ಟಿಯಲ್ಲಿ ನಾಲ್ವರು ಆಟಗಾರರು ಅವಕಾಶ ಪಡೆದಿದ್ದು, ಟೀಮ್ ಇಂಡಿಯಾದ ಮಿಸ್ಟರ್ 360 ಡಿಗ್ರಿ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿಕೊಂಡಿದ್ದಾರೆ.
ಸಿಕಂದರ್ ರಾಜಾ
2023ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಆಫ್ರಿಕಾ ಪ್ರಾಂತ್ಯದ ಅರ್ಹತಾ ಸುತ್ತಿನ ಪಟ್ಟಿಯಲ್ಲಿ ನಮೀಬಿಯಾ ಮತ್ತು ಉಗಾಂಡ ಬಳಿಕ ಮೂರನೇ ಸ್ಥಾನ ಪಡೆಯುವ ಮೂಲಕ ಜಿಂಬಾಬ್ವೆ ತಂಡ, 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಆದರೆ, ಕಳೆದ ಸಿಕಂದರ್ ರಾಜಾ ಅವರು ಟಿ20 ಸ್ವರೂಪದಲ್ಲಿ ಅತ್ಯುತ್ತಮ ಆಲ್ರೌಂಡರ್ ಪ್ರದರ್ಶನವನ್ನು ತೋರಿದ್ದಾರೆ.
ಆಲ್ಪೇಶ್ ರಾಮಾಂಜಿ
2023ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಆಫ್ರಿಕಾ ಪ್ರಾಂತ್ಯದಿಂದ ಎರಡನೇ ಸ್ಥಾನ ಪಡೆಯುವ ಮೂಲಕ ಉಗಾಂಡ ತಂಡ ಇತಿಹಾಸ ಬರೆದಿತ್ತು. ಉಗಾಂಡ ತಂಡದ ಈ ಸಾಧನೆಯಲ್ಲಿ ಆಲ್ಪೇಶ್ ರಾಮಾಂಜಿ ಅವರ ಪಾತ್ರ ಪ್ರಮುಖ ಪಾತ್ರವಹಿಸಿತ್ತು
ಮಾರ್ಕ್ ಚಾಂಪ್ಮನ್
2023ರ ವರ್ಷದಲ್ಲಿ ನ್ಯೂಜಿಲೆಂಡ್ ಆಲ್ರೌಂಡರ್ ಮಾರ್ಕ್ ಚಾಂಪ್ಮನ್ ಅವರು ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದರು. ಮುಂಬರುವ 2024ರ ಟಿ20 ವಿಶ್ವಕಪ್ನಲ್ಲಿಯೂ ಮಿಂಚಲು ಎದುರು ನೋಡುತ್ತಿದ್ದಾರೆ. 2023ರ ವರ್ಷದಲ್ಲಿ ಮಾರ್ಕ್ ಚಾಂಪ್ಮನ್ ಅವರು 19 ಇನಿಂಗ್ಸ್ಗಳಿಂದ 44.3ರ ಸರಾಸರಿ ಮ್ತು 141.87ರ ಸ್ಟ್ರೈಕ್ ರೇಟ್ನಲ್ಲಿ 576 ರನ್ಗಳನ್ನು ಗಳಸಿದ್ದಾರೆ.
ಸೂರ್ಯಕುಮಾರ್ ಯಾದವ್
2021ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಭಾರತ ತಂಡದ ಸೂರ್ಯಕುಮಾರ್ ಯಾದವ್, 2022ರ ವರ್ಷದಲ್ಲಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಇದೀಗ 2023ರ ವರ್ಷದಲ್ಲಿ ಗೆಲ್ಲುವ ನೆಚ್ಚಿನ ಆಟಗಾರರಾಗಿದ್ದಾರೆ.