ಮಂಡ್ಯ ; ಜಿಲ್ಲೆಯ ಪ್ರಸಿದ್ದ ಪುರಾತನ ಹಾಗು ಐತಿಹಾಸಿಕ ಹಿನ್ನಲೆಯುಳ್ಳ ಪಂಚಲಿಂಗೇಶ್ವರ ದೇಗುಲದಲ್ಲಿ ಸೂರ್ಯ ರಶ್ಮಿ ವಿಸ್ಮಯ ನಡೆಯಿತು. ಪಂಚಲಿಂಗೇಶ್ವರ ದೇಗುಲದ ಗರ್ಭಗುಡಿಯ ಲಿಂಗಕ್ಕೆ ಸೂರ್ಯ ರಶ್ಮಿಯ ಸ್ಪರ್ಶವಾಗಿದ್ದು, ಭಕ್ತರು ಈ ದೃಶ್ಯವನ್ನು ಕಣ್ಣು ತುಂಬಿಕೊಂಡು ಪುನೀತರಾದರು.
ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದ ಪಂಚಲಿಂಗೇಶ್ವರ ದೇವಾಲಯದಲ್ಲಿ ಪ್ರತಿವರ್ಷ ಶಿವರಾತ್ರಿಯ ಮಾರನೇ ದಿನ ಸೂರ್ಯ ರಶ್ಮಿ ವಿಸ್ಮಯ ನಡಯುವುದು.
ದೇಗುಲದಲ್ಲಿ ಪ್ರತಿವರ್ಷ ನೇಯುವ ಸೂರ್ಯ ರಶ್ಮಿ ವಿಸ್ಮಯ ಕಣ್ತುಂಬಿ ಕೊಳ್ಳಲು ಅಪಾರ ಪ್ರಮಾಣದಲ್ಲಿ ಭಕ್ತರು ಬರುತ್ತಾರೆ. ಗುರುವಾರ ಬೆಳಗ್ಗೆ 6-50ಕ್ಕೆ ಸರಿಯಾಗಿ ಸೂರ್ಯನ ಕಿರಣಗಳು ಶಿವಲಿಂಗ ಸ್ಪರ್ಶ ಮಾಡಿದವು. ಇನ್ನೂ ಮಹಾಶಿವರಾತ್ರಿ ಅಂಗವಾಗಿ ದೇಗುಲದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ರಾತ್ರಿಯಿಡಿ ದೇಗುಲದಲ್ಲಿ ವಿಶೇಷ ಪೂಜೆಗಳು ನಡೆದಿದ್ದು, ಸರತಿ ಸಾಲಿನಲ್ಲಿ ಬಂದು ಭಕ್ತರು ದೇವರ ಪಡೆದು ದೇವರ ದರ್ಶನ ಪಡೆದರು.