ರಾಜಾಜಿನಗರ ಕ್ಷೇತ್ರದ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಶಾಸಕ ಸುರೇಶ್ ಕುಮಾರ್ ಎಸ್. ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಡಾ. ರಾಜಕುಮಾರ್ ರಸ್ತೆಯಿಂದ ESI ಆಸ್ಪತ್ರೆ ಮಾರ್ಗವಾಗಿ ದ.ರಾ ಬೇಂದ್ರೆ ರಸ್ತೆಯವರೆಗೆ ಮತ್ತು 36 ನೆಯ ಅಡ್ದ ರಸ್ತೆಯಿಂದ MEI ಪಾಲಿಟೆಕ್ನಿಕ್ ವರೆಗೆ 10, 12 ಮತ್ತು 17 ನೆಯ ಮುಖ್ಯರಸ್ತೆ ಗಳಲ್ಲಿ ರಸ್ತೆಗಳಿಗೆ ಡಾಂಬರ್ ಹಾಕುವ ಕಾಮಗಾರಿಗಳು ಪ್ರಾರಂಭಗೊಂಡಿವೆ. ಈ ಕಾಮಗಾರಿಗಳ ವ್ಯವಸ್ಥೆಗಳು ತ್ವರಿತಗತಿಯಲ್ಲಿ ಸಾಗಲಿ, ಯಾವುದೇ ಸಮಸ್ಯೆ ಇಲ್ಲದೇ ಸರಿಯಾದ ವ್ಯವಸ್ಥೆಯಲ್ಲಿ ಸರಿಯಾದ ಅವಧಿಯಲ್ಲಿ ಕಾಮಗಾರಿಗಳು ಪೂರ್ಣಗೊಳ್ಳಿ ಎಂದು ತಿಳಿಸಿದರು. ಕಾಮಗಾರಿಗಳಲ್ಲಿ ಯಾವುದೇ ಲೋಪದೋಷಗಳು ಬಾರದಂತೆ ಗಮನ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

