ಬೆಂಗಳೂರು: ಇಂದು ರಾಜಾಜಿನಗರದ ಇ ಎಸ್ ಐ ಆಸ್ಪತ್ರೆಗೆ ಶಾಸಕ ಸುರೇಶ್ ಕುಮಾರ್ ಎಸ್. ಭೇಟಿ ನೀಡಿದರು. ಕೋವಿಡ್ ಸೋಂ ಕು ಹೆಚ್ಚುತ್ತಿರುವ ಹಿನ್ನೆಲೆ ಆಸ್ಪತ್ರೆಯಲ್ಲಿನ ಒಳರೋಗಿಗಳ ಪರಿಸ್ಥಿತಿ, ಅವರಿಗೆ ಬೇಕಾದ ಸೌಕರ್ಯ ಕುರಿತು ಆಸ್ಪತ್ರೆಯ ಡೀನ್ ಮತ್ತು ವೈದ್ಯರುಗಳು ಮತ್ತು ಆಡಳಿತ ಸಿಬ್ಬಂದಿ ಜೊತೆಗೆ ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ಅವರು ಸೋಂಕಿಗಳು ಆತಂಕ ಪಡುವ ಅಗತ್ಯ ಇಲ್ಲ, ಆಸ್ಪತ್ರೆಗಳಲ್ಲಿ ನಿಮಗೆ ಬೇಕಾದ ವ್ಯವಸ್ಥೆ ಆಗುತ್ತದೆ. ಇಎಸ್ ಐ ಆಸ್ಪತ್ರೆಯ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು. ಇನ್ನು ರೋಗಿಗಳಿಗೆ ಅವಶ್ಯವಿರುವ ಔಷಧಿಗಳ ವ್ಯವಸ್ಥೆ ಹಾಗೂ ಸೌಕರ್ಯಗಳಿಗೆ ಕೊರತೆ ಬಾರದಂತೆ ನೋಡಿಕೊಳ್ಳಲು ಆಡಳಿತ ಸಿಬ್ಬಂದಿಗಳಿಗೆ ಸಲಹೆ ಮತ್ತು ಸೂಚನೆ ನೀಡಿದರು.
