ದೊಡ್ಮನೆಯಲ್ಲಿ (Bigg Boss Kannada 10) ರೈತ ವರ್ತೂರು ಸಂತೋಷ್ (Varthur Santhosh) ಅವರಿಗೆ ಹೊರಗಡೆ ಅಪಾರ ಅಭಿಮಾನಿಗಳ ಬಳಗವಿದೆ. ಕೆಲ ದಿನಗಳ ಹಿಂದೆ ಹುಲಿ ಉಗುರಿನ ಕೇಸ್ ವಿಚಾರವಾಗಿ ಜೈಲು ಸೇರಿದ್ದರು. ಬೇಲ್ ಮೂಲಕ ಬಿಡುಗಡೆಯಾದ್ಮೇಲೆ ಸಂತೋಷ್, ದೊಡ್ಮನೆ ಆಟ ಗೆದ್ದು ಬರಲೇಬೇಕೆಂದು ಅಭಿಮಾನಿಗಳು ತಮ್ಮ ವೋಟ್ಗಳ ಮೂಲಕ ಪ್ರೀತಿ ತೋರಿಸುತ್ತಿದ್ದಾರೆ. ಹೀಗಿರುವಾಗ ಸೇಫ್ ಆಗಿದ್ರೂ, ಕೂಡ ಬಿಗ್ ಬಾಸ್ನಿಂದ ಹೊರಬರುತ್ತೇನೆ ಎಂದು ವರ್ತೂರು ಸಂತೋಷ್ ಪಟ್ಟು ಹಿಡಿದಿದ್ದಾರೆ. ಸಂತೋಷ್ ಮಾತಿಗೆ ವೇದಿಕೆಯಿಂದ ಸುದೀಪ್ ಹೊರನಡೆದಿದ್ದಾರೆ.
ಹೊರಗೆ ಒಂದು ಘಟನೆ ನಡೆದಿದೆ. ಅದರಿಂದ ಹೊರ ಬಂದು ನಾನು ಇಲ್ಲಿ ಆಡಬೇಕು ಎಂದರೆ ಕಷ್ಟ ಆಗ್ತಿದೆ ಎಂದು ಕಣ್ಣೀರು ಹಾಕಿದರು ವರ್ತೂರು. ಜೊತೆಗೆ ನಾನು ಹೊರಗೆ ಹೋಗ್ತೀನಿ ಎಂದು ಹಠ ಹಿಡಿದರು. ನಿಮಗೆ ಬಂದಿರೋ ಮತಗಳ ಸಂಖ್ಯೆ 34 ಲಕ್ಷ. ಜನರ ಅಭಿಪ್ರಾಯದ ವಿರುದ್ಧ ನಾನು ಹೋಗಲ್ಲ ಎಂದು ಸುದೀಪ್ ಅವರು ವೇದಿಕೆಯಿಂದಲೇ ಹೊರ ನಡೆದಿದ್ದಾರೆ. ವರ್ತೂರು-ಸುದೀಪ್ ಮಾತಿಗೆ ಇತರೆ ಸ್ಪರ್ಧಿಗಳು ಶಾಕ್ ಆದರು
ವೀಕೆಂಡ್ನಲ್ಲಿ ಒಬ್ಬರನ್ನು ಎಲಿಮಿನೇಟ್ ಮಾಡಲಾಗುತ್ತದೆ. ಅತೀ ಕಡಿಮೆ ವೋಟ್ ಬಿದ್ದವರು ದೊಡ್ಮನೆಯಿಂದ ಹೊರ ಹೋಗುತ್ತಾರೆ. ಈ ವಾರ ಅನೇಕರು ನಾಮಿನೇಟ್ ಆಗಿದ್ದರು. ಈ ಪೈಕಿ ನಮ್ರತಾ, ಕಾರ್ತಿಕ್ ಸೇವ್ ಆಗಿದ್ದಾರೆ. ಭಾನುವಾರದ (ನ.12) ಎಪಿಸೋಡ್ನಲ್ಲಿ ವರ್ತೂರು ಸಂತೋಷ್ ಕೂಡ ಸೇವ್ ಆದರು. ಆದರೆ, ಇದನ್ನು ಅವರು ಒಪ್ಪಿಕೊಳ್ಳೋಕೆ ರೆಡಿ ಇಲ್ಲ. ಅವರಿಗೆ ಹೊರಬರಲೇಬೇಕು ಎಂದೆನಿಸಿದೆ ಎಂದು ಮಾತನಾಡಿದ್ದಾರೆ.