ಧಾರವಾಡ: ಕಟ್ಟಡ ಕಾರ್ಮಿಕ ಮಕ್ಕಳ ಶಿಷ್ಯ ವೇತನದ ಹಿಂದಿನ ಮೊತ್ತ ಮುಂದುವರೆಸಲು ಹಾಗೂ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಖಾತ್ರಿಪಡಿಸಲು ಅಗ್ರಹಿಸಿ, ಧಾರವಾಡದಲ್ಲಿ ವಿದ್ಯಾರ್ಥಿಗಳು ಬೀದಿಗೆ ಇಳಿದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಎಐಡಿಎಸ್ಓ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಧಿಕ್ಲಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೇವಲಗ್ಯಾರಂಟಿಗಳ ಹೆಸರಿನಲ್ಲಿಯೇ ಕಾಲ ದೂಡುತ್ತಿದೆ. ವಿದ್ಯಾರ್ಥಿಗಳ ವೇತನ ಶಿಕ್ಷಣದ ಬಗ್ಗೆ ಯಾವುದೇ ಮೂತುವರ್ಜಿ ತೋರುತ್ತಿಲ್ಲ. ವಿದ್ಯಾರ್ಥಿಗಳ ಶಿಷ್ಯ ವೇತನ ಸಕಾಲಕ್ಕೆ ಬೀಡುಗಡೆ ಮಾಡುತ್ತಿಲ್ಲ. ಇದರ ಜೊತೆಗೆ ಕಟ್ಟಡ ಕಾರ್ಮಿಕ ಮಕ್ಕಳ ಶಿಷ್ಯ ವೇತನ ತಡೆಯಲು ನಿರ್ಧಾರ ಮಾಡಿತ್ತು,ಇದು ಎಷ್ಟರಮಟ್ಟಿಗೆ ಎಂದು ಪ್ರಶ್ನೆ ಮಾಡಿದರು. ವಿದ್ಯಾರ್ಥಿಗಳ ಹಿತ ಕಾಪಾಡಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗುತ್ತಿದೆ.
ಈ ಕೂಡಲೇ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ವೇತನ ಸಕಾಲಕ್ಕೆ ಸಿಗುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು, ಕಟ್ಟಡ ಕಾರ್ಮಿಕ ಮಕ್ಕಳ ಶಿಷ್ಯ ವೇತನ ಹಿಂದಿನ ಮೊತ್ತವನ್ನು ಮುಂದುವತೆಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆಗಳ ಕುರಿತು ನಿರ್ಲಕ್ಷ್ಯ ತೋರಿದ್ದಲ್ಲಿ ರಾಜ್ಯವ್ಯಾಪಿ ಹೋರಾಟದ ಕಡೆ ನಾವು ಹೆಜ್ಕೆ ಇಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.