ಬೆಂಗಳೂರು: ಕರ್ನಾಟಕ ಬಂದ್ ಗೆ ನನ್ನ ಬೆಂಬಲ ಇದೆ, ಕನ್ನಡದ ವಿಷಯ ಬಂದಾಗ ಎಲ್ಲರೂ ಬೆಂಬಲ ಕೊಡಬೇಕು ಎಂದು ನಟಿ ಅದಿತಿ ಪ್ರಭುದೇವ ಹೇಳಿಕೆ ನೀಡಿದ್ದಾರೆ. ಶ್ರೀಕಿ, ಅದಿತಿ ಪ್ರಭುದೇವ ನಟನೆಯ ಗಜಾನನ ಗ್ಯಾಂಗ್ ಟ್ರೈಲರ್ ಅನ್ನ ನಟಿ ಮೇಘನಾ ರಾಜ್ ಸರ್ಜಾ ಲಾಂಚ್ ಸಂದರ್ಭ ಮಾತನಾಡಿದ ನಟಿ ಅದಿತಿ ಪ್ರಭುದೇವ, ನಾನು ಬಂದ್ ನಲ್ಲಿ ಖಂಡಿತ ಭಾಗವಹಿಸುತ್ತೇನೆ. ಮರಾಠಿಗರಿಂದ ನಮ್ಮ ತಾಯಿಗೆ ಅವಮಾನ ಆಗಿರೋದು. 31 ನೇ ತಾರೀಖು ಎಲ್ಲರೂ ಬಂದ್ ಗೆ ಬೆಂಬಲ ಕೊಡಿ. ಬರೀ ಬಂದ್ ಮಾಡೋದಲ್ಲಾ, ನಮ್ಮ ವಿರೋಧಿಗಳಿಗೆ ಒಂದು ಸ್ಟ್ರಾಂಗ್ ಮೆಸೇಜ್ ತಲುಪಬೇಕು ಅಂತ ನಟಿ ಅಧಿತಿ ಪ್ರಭುದೇವ ಹೇಳಿದ್ದಾರೆ.
