ಬೆಂಗಳೂರು: ರಾಜ್ಯ ಸರ್ಕಾರವು ಆಸ್ತಿ ಖರೀದಿದಾರರಿಗೆ ಮತ್ತು ನೋಂದಣಿದಾರರಿಗೆ ಇದೀಗ ಸಿಹಿಸುದ್ದಿ ನೀಡಿದ್ದು, ರೆವಿನ್ಯೂ ಮನೆಯ ಗೈಡೆನ್ಸ್ ವ್ಯಾಲ್ಯೂ ಶೆ.10ರಷ್ಟು ಕಡಿಮೆ ಮಾಡಿದೆ. ಜಮೀನು, ಸೈಟು, ಪ್ಲ್ಯಾಟ್ ಖರೀದಿಗೆ ರಿಜಿಸ್ಟ್ರೇಷನ್ ಶುಲ್ಕಶೇಕಡಾ 10ರಷ್ಟು ಕಡಿಮೆ ಮಾಡಲಾಗಿದೆ.
ಆಸ್ತಿ ವಹಿವಾಟು ಸಂಬಂಧಿಸಿದಂತೆ, ಯಾರು ಖರೀದಿ ಮಾಡ್ತಾರೆ ಅಂತವರಿಗೆ ರೆವಿನ್ಯೂ, ಸೈಟ್, ಫ್ಲಾಟ್ ಗೈಡೆನ್ಸ್ ವ್ಯಾಲ್ಯು 10% ಕಡಿಮೆ ಮಾಡಲಾಗುತ್ತೆ. ಅಗ್ರಿಮೆಂಟ್ ಮಾಡಿರೋ, ರಿಜಿಸ್ಟ್ರೇಷನ್ ಮಾಡಿಸುವರಿಗೆ ಇದು ಅನ್ವಯಸಲಾಗಿದೆ. ಆದ್ರೆ, ಮೂರು ತಿಂಗಳು ಮಾತ್ರ ಅವಕಾಶ ನೀಡಲಾಗಿದೆ. ಮಾರ್ಚ್ 31ರವರೆಗೂ ಈ ರಿಯಾಯಿತಿ ನೀಡಲು ನಿರ್ಧರಿಸಲಾಗಿದ್ದು, ಆಯಾ ಪ್ರದೇಶದ ಗೈಡ್‌ಲೈನ್ಸ್ ವ್ಯಾಲ್ಯೂ ಪ್ರಕಾರ ಇದು ಅನ್ವಯವಾಗಲಿದ್ದು, ಎಲ್ಲಾ ರೀತಿಯ ರಿಜಿಸ್ಟ್ರೇಷನ್‌ಗೆ ಇದು ಅನ್ವಯವಾಗಲಿದೆ.
