ಬೆಳಗಾಗಿ : ಬೆಂಕಿ ತಗುಲಿ ಜಾನುವಾರುಗಳಿಗೆ ಶೇಖರಿಸಿಟ್ಟಿದ್ದ ಮೇವಿನ ಬಣವೆಗಳು ಬೆಂಕಿಗಾಹುತಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಣಿವಾಡ ಗ್ರಾಮದಲ್ಲಿ ನಡೆದಿದೆ.
ಬೇಸಿಗೆ ಕಾಲ ಹಿನ್ನೆಲೆ ಜಾನುವಾರುಗಳಿಗಾಗಿ ಒಣ ಮೇವು ಶೇಖರಿಸಿಟ್ಟಿದ್ದರು. ಬಸಗೌಡ ಪಾಟೀಲ, ನಿರ್ವಾಣಿ ಜೋಡಟ್ಟಿ ಎಂಬ ರೈತರ ಮೇವು ಬೆಂಕಿಗಾಹುತಿಯಾಗಿದೆ. ಇಬ್ಬರು ರೈತರು ಸಹ ಬೇರೆ ಕಡೆಯಿಂದ ಮೇವನ್ನು ಸಂಗ್ರಹಿಸಿದ್ದರು. ಆದರೆ ಮೇವಿಗೆ ಏಕಾಏಕಿ ಬೆಂಕಿ ತಗುಲಿದ್ದು, ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತುರಿದ ಪರಿಣಾಮ ಒಣಮೇವು ಭಸ್ಮವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.