ಶಿಡ್ಲಘಟ್ಟ: ತಾಲ್ಲೂಕಿನ ಚಿಕ್ಕದಾಸರಹಳ್ಳಿಯಲ್ಲಿ ಜಾತಿ ತಾರತಮ್ಯ ಆಚರಣೆಯಲ್ಲಿರುವುದು ಕಂಡು ಬಂದಿದೆ. ಸರ್ಕಾರಿ ಶಾಲೆಯಲ್ಲಿ ಅಡುಗೆ ಮಾಡುವ ಸಿಬ್ಬಂದಿ ಪರಿಶಿಷ್ಟ ಜಾತಿಯವರೆಂಬ ಕಾರಣಕ್ಕೆ ಕೆಲ ವಿದ್ಯಾರ್ಥಿಗಳು ಮದ್ಯಾನಃದ ಬಿಸಿ ಊಟ ಸೇವಿಸದೆ ಮನೆಗಳಿಗೆ ತೆರಳುವುದು ಕಂಡು ಬಂದಿದೆ. ಚಿಕ್ಕದಾಸರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ನೂರಿಪ್ಪತ್ತು ವಿದ್ಯಾರ್ಥಿಗಳು ಕಲೆಯುತ್ತಿದ್ದು, ಅದರಲ್ಲಿ ಹತ್ತರಿಂದ ಇಪ್ಪತ್ತು ಮಕ್ಕಳು ತಮ್ಮ ಮನೆಗಳಿಗೆ ತೆರಳಿ ಊಟ ಮಾಡಿಕೊಂಡು ಬರುವ ವಾಡಿಕೆ ರೂಡಿಸಿಕೊಂಡಿದ್ದಾರೆ.
ಪೋಷಕರ ಅಣತಿಯಂತೆ ನಾವು ಶಾಲೆಯಲ್ಲಿ ಊಟ ಮಾಡುತ್ತಿಲ್ಲ ಎಂದು ಮಕ್ಕಳು ಹೇಳಿಕೊಂಡಿದ್ದಾರೆ. ಇನ್ನು ಕೆಲ ಮಕ್ಕಳು ನಾವು ದೇವಸ್ಥಾನದಲ್ಲಿ ಪೂಜೆ ಮಾಡುವುದರಿಂದ ಪರಿಶಿಷ್ಟ ಜಾತಿಯವರು ತಯಾರಿಸಿದ ಅಡುಗೆ ತಿನ್ನುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲೆಯ ಮುಖ್ಯ ಶಿಕ್ಷಕ ಪಿಳ್ಳೇಗೌಡ ಶಾಲೆಗೆ ಅಡುಗೆ ಮಾಡಲು ದಲಿತರು ನೇಮಕವಾದಾಗಿಂದ ಹೀಗೆ ಕೆಲ ಮಕ್ಕಳು ಊಟಕ್ಕಾಗಿ ಮನೆಗೆ ಹೋಗುತ್ತಿದ್ದಾರೆ, ಈ ಬಗ್ಗೆ ನಾನು ಮಕ್ಕಳು ಹಾಗು ಪೋಷಕರೋಂದಿಗೆ ಮನ ಒಲಿಸುವ ಪ್ರಯತ್ನ ಮಾಡಿದ್ದೇನೆ ಎಂದರು.
