ಬಾಗಲಕೋಟೆ : ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಕ್ಷೇತ್ರಾಧಿಪತಿ ಕಾಡಸಿದ್ದೇಶ್ವರ ದೇವಸ್ಥಾನ ಮತ್ತು ಸ್ಥಳೀಯ ದೇವಿ ಗುಡಿಯ ಬುದ್ನಿ ಶರಣಬಸವೇಶ್ವರ ಮಠದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾದಿಗಳು ಜರುಗಿದವು.
ರಾತ್ರಿಯಿಡಿ ಕಾಡಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ, ಮಂಗಳಾಚರಣೆ, ನಗಾರಿ ಸೇವೆಗಳು ವಿಶೇಷವಾಗಿ ನಡೆದವು. ಸ್ಥಳೀಯ ಭಜನಾ ಮಂಡಳಿಯಿಂದ ಭಜನಾ ಸೇವೆ ಜರುಗಿದವು. ಬುದ್ನಿ ಮಠದಲ್ಲಿ ಜಿ.ಬಿ.ಬುದ್ನಿ ಗುರುಗಳ ನೇತೃತ್ವದಲ್ಲಿ ಪೂಜಾದಿಗಳು ನಡೆದು ಬಂದವು. ಸಕಲ ಸದ್ಭಕ್ತರು ಭಾಗಿಯಾಗಿ ಶಿವರಾತ್ರಿಯನ್ನು ಸರಳವಾಗಿ ಆಚರಿಸಿದರು. ನಗರದ ಮಹಾದೇವ ದೇವಸ್ಥಾನ, ಗುಂಡಯ್ಯನ ಮಠ ಸೇರಿದಂತೆ ವಿವಿಧೆಡೆಗಳಲ್ಲಿ ಶಿವರಾತ್ರಿ ಕಾರ್ಯಕ್ರಮಗಳು ಜರುಗಿದವು.