ಚಿತ್ರದುರ್ಗ ಫೆ, 11..ನಮ್ಮದು ಸದಾ ರೈತ ಪರ, ಜನ ಪರ ಸರ್ಕಾರವಾಗಿದ್ದು ಮುಂದೆಯೂ ಕೃಷಿ ಕ್ಷೇತ್ರದ ಶ್ರೇಯೋಭಿವೃದ್ದಿಗೆ ವಿಶೇಷ ಆದ್ಯತೆ ನೀಡಲಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದರು.
IPL2025: ವಿರಾಟ್ ಫ್ಯಾನ್ಸ್ ಗೆ ಗುಡ್ ನ್ಯೂಸ್: RCB ತಂಡಕ್ಕೆ ಕೊಹ್ಲಿಯೇ ಕ್ಯಾಪ್ಟನ್!
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ರೇಣುಕಾಪುರ ಗ್ರಾಮದಲ್ಲಿ ಜಲಾನಯನ ಇಲಾಖೆ ವತಿಯಿಂದ ಮಳೆ ಆಶ್ರಿತ ಪ್ರದೇಶದಲ್ಲಿ ಆದಾಯೋತ್ಪನ್ನ ಮಾರ್ಗಗಳ ಮೂಲಕ ಕೃಷಿ ಸಂಬಂಧಿತ ವಲಯಗಳ ಅಭಿವೃದ್ಧಿ ಮತ್ತು ಪುನಶ್ಚೇತನಗೊಳಿಸುವ ಯೋಜನಯ ಫಲಶೃತಿ ಪರಿಶೀಲನಾ ಕಾರ್ಯಕ್ರಮ ಉದ್ಘಾಟಿಸಿ ಸಚಿವರು ಮಾತನಾಡಿದರು.
ಸರ್ಕಾರದ ಯೋಜನೆ ಪರಿಣಾಕಾರಿ ಅನುಷ್ಠಾನ ವಾದರೆ ಗ್ರಾಮದ ಅಭಿವೃದ್ದಿಯ ಚಿತ್ರಣ ಹೇಗೆ ಬದಲಾಗಬಹುದು ಎಂಬುದಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರೇಣುಕಾಪುರ ಗ್ರಾಮ ಉದಾಹರಣೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರದುರ್ಗ ಅತ್ಯಂತ ಕಡಿಮೆ ಮಳೆ ಬೀಳುವ ಜಿಲ್ಲೆಯಾಗಿದೆ ಹಾಗಾಗಿ
ಜಲಾನಯನ ಇಲಾಖೆಯ
RAD – RFTRAAR ಯೋಜನೆಯ ಮೂಲಕ ಜಿಲ್ಲೆಗೆ 5 ಕೋಟಿ ರೂ ಅನುದಾನ ನೀಡಲಾಗಿದೆ.60 ಗ್ರಾಮಗಳಲ್ಲಿ ಇದು ಅನುಷ್ಠಾನವಾಗುತ್ತಿದೆ ಕೃಷಿ ಸಚಿವರು ಹೇಳಿದರು.
ಪ್ರತಿ ಹಸುವಿನ ಖರೀದಿಗೆ 20 ಸಾವಿರ ಆರ್ಥಿಕ ನೆರವು ನೀಡಿದ ಕಾರಣ ಗೋವುಗಳ ಸಂಖ್ಯೆ ಹೆಚ್ಚಿ ಗ್ರಾಮದ ಸಾಮಾಜಿಕ , ಆರ್ಥಿಕ ಪರಿಸ್ಥಿತಿ ಬದಲಾಗಿದೆ .
ಇತರ ಗ್ರಾಮಗಳಿಗೂ ಇದು ಮಾದರಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹಿಂದಿನ ಸರ್ಕಾರ ನಿಲ್ಲಿಸಿದ್ದ ಕೃಷಿ ಭಾಗ್ಯ ಯೋಜನೆಗೆ ಮರು ಚಾಲನೆ ನೀಡಿ ಎಲ್ಲಾ ತಾಲ್ಲೂಕುಗಳಿಗೆ ವಿಸ್ತರಣೆ ಮಾಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ಜನಸಾಮಾನ್ಯರ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದೆ. ರೈತರಿಗೆ 5 ಲಕ್ಷದ ವರಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ .
ಭರವಸೆ ನೀಡಿದಂತೆ ಎಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡಿದ್ದು ಪ್ರತಿ ತಾಲ್ಲೂಕಿಗೆ ಪ್ರತಿ ತಿಂಗಳು 200-230 ಕೋಟಿ ಅನುದಾನ ಇದ್ದಕ್ಕಾಗಿಯೇ ವೆಚ್ಚ ಮಾಡಲಾಗುತ್ತಿದೆ. ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.
ಜಲಾನಯನ ಇಲಾಖೆ ಆಯುಕ್ತರಾದ ಮಹೇಶ್ ಶಿರೂರು, ನಿರ್ದೇಶಕರಾದ ಬಂಥನಾಳ್, ಜಂಟಿ ಕೃಷಿ ನಿರ್ದೇಶಕರಾದ ,ಉಪ ನಿರ್ದೇಶಕರಾದ ಪ್ರಭಾಕರ್ ಮಂಜುನಾಥ, ಸಾವಯವ ಮಿಷನ್ ಮಾಜಿ ಅಧ್ಯಕ್ಷರಾದ ಸೋಮಣ್ಣ, ರೇಣುಕಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಾನಜ್ಜ, ಪ್ರಮುಖರಾದ ನಾಗೇಶ್ ರೆಡ್ಡಿ, ವಿಶ್ವನಾಥ ರೆಡ್ಡಿ, ಜಾವಗಲ್ ಮಂಜುನಾಥ್, ರೆಡ್ಡಿ ಹಳ್ಳಿ ವೀರಣ್ಣ, ಪಾಲಯ್ಯ ಮತ್ತಿತರು ಉಪಸ್ಥಿತರಿದ್ದರು