ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕ್ವಿಂಟನ್ ಡಿ ಕಾಕ್ ತಂದೆಯಾದ ಸಂಭ್ರಮದಲ್ಲಿದ್ದಾರೆ. ಡಿ ಕಾಕ್ ಪತ್ನಿ ಸಶಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಡಿ ಕಾಕ್ ಈ ಸಂತೋಷದ ಸುದ್ದಿಯನ್ನ ಹಂಚಿಕೊಂಡಿದ್ದು, ಮಗಳಿಗೆ ಕಿಯಾರ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ.
ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಡಿ ಕಾಕ್ ಸರಣಿಯ ಕೊನೆಯ 2 ಪಂದ್ಯಗಳನ್ನ ಆಡಲ್ಲ ಎಂದು ತಿಳಿಸಿದ್ರು. ಆದ್ರೆ, ಮೊದಲ ಪಂದ್ಯದ ಬಳಿಕ ಟೆಸ್ಟ್ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ರು. ನಾನು ಮತ್ತು ಸಶಾ ನಮ್ಮ ಮೊದಲ ಮಗುವನ್ನು ಸ್ವಾಗತಿಸಲಿರುವಾಗ ಜೀವನದಲ್ಲಿ,

ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದರ ಕುರಿತು ಯೋಚಿಸಲು ನನಗೆ ಸಮಯ ಬೇಕು. ಈ ಜಗತ್ತಿನಲ್ಲಿ ನಮ್ಮ ಕುಟುಂಬಕ್ಕೂ ಮೀರಿ ನನಗೇನು ಇಲ್ಲ. ನಮ್ಮ ಜೀವನದ ಈ ಹೊಸ ಅಧ್ಯಾಯದಲ್ಲಿ ಅವರೊಂದಿಗೆ ಹೆಚ್ಚು ಸಮಯ ಹೊಂದಲು ನಾನು ಬಯಸುತ್ತೇನೆ ಎಂದು ಡಿ ಕಾಕ್ ನಿವೃತ್ತಿ ಸಮಯದಲ್ಲಿ ಹೇಳಿದರು.