ಚಾಮರಾಜನಗರ: ಜನರ ರಕ್ತ ಹೀರಿದವರು ಕಾಂಗ್ರೆಸ್ಸಿಗರು, ನಾವಲ್ಲ ಎಂದು ಆಡಳಿತ ನಡೆಸುತ್ತಿರುವವರು ರಾಕ್ಷಸರು, ರಕ್ತ ಹೀರುವವರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಸೋಮಶೇಖರ್ ಟಾಂಗ್ ಕೊಟ್ಟರು. ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಯಡಿಯೂರಪ್ಪ ಹಾಗೂ ಬೊಮ್ಮಾಯಿ ಜನಪರವಾದ ಕಾರ್ಯಕ್ರಮಗಳನ್ನು ತಂದು ಉತ್ತಮ ಆಡಳಿತ ಕೊಟ್ಟಿದ್ದಾರೆ. ಆದರೆ, ವಿರೋಧ ಪಕ್ಷದವರಾದ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಏನಾದರೂ ಹೇಳುವುದೊಂದು ಚಟ,
ಏನಾದ್ರೂ ಹೇಳುವುದು, ಆಮೇಲೆ ಸುಮ್ಮನೆ ಕೂರುವುದು ಮಾಡುತ್ತಾರೆ, 40% ಸರ್ಕಾರ ಎನ್ನುತ್ತಾರೆ ದಾಖಲೆ ಹಿಡಿದು ಮಾತನಾಡಬೇಕು,ಹಾದಿ-ಬೀದಿಯಲ್ಲಿ ಮಾತನಾಡುವರಂತಲ್ಲಾ ಎಂದು ವ್ಯಂಗ್ಯವಾಡಿದರು. ಮೇಕೆದಾಟು ಯೋಜನೆ ಬಗ್ಗೆ ಕಾಂಗ್ರೆಸ್ ಪಾದಯಾತ್ರೆ ನಡೆಸಿ ರಾಜಕೀಯ ಮಾಡುತ್ತಿದೆ. ಈಗಾಗಲೇ, ಯೋಜನೆ ಅನುಷ್ಠಾನಕ್ಕಾಗಿ ಸಿಎಂ ಎಲ್ಲಾ ಕ್ರಮ ಕೈಗೊಂಡಿದ್ದು ತಮಿಳುನಾಡಿನ ಕ್ಯಾತೆಗೆ ಸೂಕ್ತ ಉತ್ತರ ಕೊಟ್ಟಿದ್ದಾರೆ.

ಸಿದ್ದರಾಮಯ್ಯ 5 ವರ್ಷ ಆಡಳಿತ ನಡೆಸಿದಾಗ ಏನು ಮಾಡಿದರು, ಬಿಜೆಪಿ ಸರ್ಕಾರ ಏನು ಮಾಡಿದೆ ಸೇರಿದಂತೆ ಎಲ್ಲಾ ಸೂಕ್ಷ್ಮ ವಿಚಾರಗಳ ಸಂಬಂಧ ಶೀಘ್ರವೇ ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸುವರು ಎಂದು ತಿಳಿಸಿದರು. ಇದೇ ವೇಳೆ, ಕೊರೊನಾ ಕಟ್ಟೆಚ್ಚರ, ಲಾಲ್ ಡೌನ್ ಕುರಿತು ಪ್ರತಿಕ್ರಿಯಿಸಿ, ಸದ್ಯಕ್ಕೆ ಮಹಾರಾಷ್ಟ್ರ ಗಡಿಯನ್ನು ಮುಚ್ಚುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ, ತಜ್ಞರ ಸಲಹೆ ಮೇರೆಗೆ ನಿಯಮಗಳನ್ನು ತೆಗೆದುಕೊಳ್ಳಬೇಕು,ಸದ್ಯಕ್ಕೆ ಲಾಕ್ ಡೌನ್ ಮಾಡುವ ಯೋಚನೆ ಇಲ್ಲ ಎಂದರು.
