ತಲೆಗೂದಲು ತುಂಬಾ ನಯವಾಗಿರಬೇಕು ಅನ್ನೋದು ಎಲ್ಲಾ ಹುಡುಗಿಯರ ಆಸೆಯಾಗಿರುತ್ತೆ. ಹೀರೋಯಿನ್ಗಳ ಸಾಫ್ಟ್&ಸ್ಲೀಕ್ ಕೂದಲು ನೋಡಿದಾಗ ಅಯ್ಯೋ ಅಂಥ ಕೂದಲು ನಮಗಿಲ್ವಲ್ಲಾ ಅಂತಾನೂ ಅನ್ನಿಸುತ್ತೆ. ಅದಕ್ಕೆಲ್ಲಾ ಹಣ ಖರ್ಚು ಮಾಡ್ಬೇಕು ಅಂತ ವರಿ ಮಾಡ್ಬೇಡಿ. ಮನೆಯಲ್ಲೇ ಸುಲಭವಾಗಿ ಸಿಗೋ ಕೆಲವು ಸಾಮಗ್ರಿಗಳಿಂದ ಸಾಫ್ಟ್ ಕೂದಲು ನಿಮ್ಮದಾಗಿಸಿಕೊಳ್ಳಬಹುದು. ಇದಕ್ಕೆ ಸ್ವಲ್ಪ ಸಮಯ ಮೀಸಲಿಡಬೇಕು ಅಷ್ಟೇ. ಆ ಟಿಪ್ಸ್ ಇಲ್ಲಿದೆ ನೋಡಿಗುಲಾಬಿ ದಳ- ಕೊಬ್ಬರಿ ಎಣ್ಣೆ
ಗುಲಾಬಿಯನ್ನ ಅಲಂಕಾರಕ್ಕೆ, ಮುಡಿದುಕೊಳ್ಳೋಕೆ ಬಳಸೋ ಜೊತೆಗೆ ಅದರಿಂದ ನಿಮ್ಮ ಕೂದಲ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಇದಕ್ಕೆ ನೀವು ಕಷ್ಟನೂ ಪಡಬೇಕಿಲ್ಲ. ತಲೆಗೆ ಎಣ್ಣೆ ಹಚ್ಚುವಾಗೆಲ್ಲಾ ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು. ಕೊಬ್ಬರಿ ಎಣ್ಣೆಯನ್ನ ಸ್ವಲ್ಪ ಬಿಸಿ ಮಾಡಿ(ಸ್ವಲ್ಪ ಬಿಸಿಯಾದ್ರೆ ಸಾಕು, ಹೊಗೆ ಬರುವಂತೆ ಕಾಯಿಸಬಾರದು) ಅದಕ್ಕೆ ಗುಲಾಬಿ ದಳಗಳನ್ನ ಹಾಕಿ.
ಹೀಗೆ ಮಾಡಿದಾಗ ನೊರೆ ಬರುತ್ತದೆ. ಎಣ್ಣೆ ತಣ್ಣಗಾದ ನಂತರ ಗುಲಾಬಿ ದಳಗಳನ್ನ ಕಿವುಚಿ ತೆಗೆಯಿರಿ. ನಂತರ ಎಣ್ಣೆಯನ್ನ ತಲೆಗೆ ಸಂಪೂರ್ಣವಾಗಿ ಹಚ್ಚಿ ಮಸಾಜ್ ಮಾಡಿ. 3 ಗಂಟೆಗಳ ನಂತರ ಸ್ನಾನ ಮಾಡಬಹುದು. ಅಥವಾ ರಾತ್ರಿ ಎಣ್ಣೆ ಹಚ್ಚಿಕೊಂಡು ಬೆಳಿಗ್ಗೆ ತಲೆಗೆ ಸ್ನಾನ ಮಾಡಬಹುದು.
ಬಿಳಿ ಕೂದಲು ಬಂದಿದ್ರೆ ಮಾತ್ರ ತಲೆಗೆ ಮೆಹೆಂದಿ ಹಚ್ಚಬೇಕು ಅಂತೇನಿಲ್ಲ. ತಲೆ ಕೂದಲು ಸಾಪ್ಟ್ ಆಗಲು ಹಚ್ಚಬಹುದು!