ಮುಂಬೈ: ಎನ್ಡಿಎ ಜೊತೆ ಕೈ ಜೋಡಿಸಿರುವ ಅಜಿತ್ ಪವಾರ್ ಮೈತ್ರಿ ಕೂಟದಿಂದ ಹೊರ ಹೋಗುತ್ತಾರಾ ಈ ಪ್ರಶ್ನೆ ಈಗ ಎದ್ದಿದೆ. ಮನೆಯೊಳಗೆ ರಾಜಕೀಯ ಪ್ರವೇಶಿಸಬಾರದು. ಕುಟುಂಬದ ಮಧ್ಯೆ ಒಡಕು ಬಂದರೆ ಸಮಾಜ ಇಷ್ಟಪಡುವುದಿಲ್ಲ ಎಂದು ಎನ್ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಅಜಿತ್ ಪವಾರ್ ತಮ್ಮ ತಪ್ಪನ್ನು ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಲೋಕಸಭಾ ಚುನಾವಣೆಯಲ್ಲಿ ಅಜಿತ್ ತನ್ನ ಪತ್ನಿ ಸುನೇತ್ರಾ ಪವಾರ್ರವರನ್ನು ಸೋದರ ಸಂಬಂಧಿ ಎನ್ಸಿಪಿ (ಶರದ್) ನಾಯಕಿ ಸುಪ್ರಿಯಾ ಸುಳೆ ವಿರುದ್ಧ ಕಣಕ್ಕಿಳಿಸಿದ್ದರು. ಇದರಲ್ಲಿ ತಾವು ತಪ್ಪು ಮಾಡಿರುವುದಾಗಿ ಸಾರ್ವಜನಿಕವಾಗಿ ಒಪ್ಪಿಕೊಂಡರು.
ನಿಮ್ಮ ಅಂಗೈನ ಈ ಭಾಗದಲ್ಲಿ ಮಚ್ಚೆಗಳಿದ್ದರೆ ಏನರ್ಥ: ಜ್ಯೋತಿಷ್ಯ ಹೇಳೋದೇನು ನೋಡಿ
ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಕಾರಣ ಈಗ ಆಜಿತ್ ತಮ್ಮ ತಪ್ಪನ್ನು ಒಪ್ಪಿಕೊಂಡಿರುವುದು ಎಲ್ಲರಲ್ಲೂ ಕುತೂಹಲವನ್ನು ಮೂಡಿಸಿದೆ. ಕೆಲವೇ ದಿನಗಳಲ್ಲಿ ಅವರು `ಮಹಾಯುತಿ’ ಮೈತ್ರಿ ಕೂಟದಿಂದ ಹೊರಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.