ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆದಿಕೊಂಡ ಗೀತಾ ಶಿವರಾಜ್ ಕುಮಾರ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಬಗ್ಗೆ ಸಹೋದರ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗರಂ ಆಗಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೋಶಿಯಲ್ ಮೀಡಿಯಾ ಒಂದು ಬದನೆಕಾಯಿ’ ಎಂದು ಹೇಳಿದ್ದಾರೆ.
Bigg News : ಲೋಕಸಭಾ ಚುನಾವಣೆ : ಮಾರ್ಚ್ 15ರಿಂದ ಪ್ರಧಾನಿ ಮೋದಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ
ಸಂಸದ ಬಿ.ವೈ. ರಾಘವೇಂದ್ರ ಮೊದಲ ಬಾರಿಗೆ ಸಂಸದರಾದಾಗ ಏನು ಕಡಿದು ಕಟ್ಟೆ ಹಾಕಿದ್ರು? ಆ್ಯಂಬುಲೆನ್ಸ್ ಹಾಗೂ ಪೊಲೀಸ್ ವಾಹನದಲ್ಲಿ ಹಣ ತರಿಸಿ ಚುನಾವಣೆ ಮಾಡಿದ್ರು. ಹಣದಿಂದ ಆಗಿನ ಸಿಎಂ ಪುತ್ರ ಗೆದ್ದಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ನನ್ನ ಚೆಕ್ ಬೌನ್ಸ್ ಬಗ್ಗೆ ಬಹಳ ಪ್ರಚಾರವಾಯ್ತು. ಆಗ ನಾನು ಚೋಟಾ ಸಿಗ್ನೇಚರ್ ಬಗ್ಗೆ ಮಾತನಾಡಿದ್ದೆ. ಚೋಟಾ ಸಿಗ್ನೇಚರ್ ಮಾಡಿ ಯಾರಿಗೆ ಜೈಲಿಗೆ ಕಳಿಸಿದ್ರು ಎಂಬುದು ಮಾತನಾಡಿದ್ದೆ. ಆಗ್ಯಾಕೆ ಈ ಬಗ್ಗೆ ಮಾತನಾಡದೇ ಸುಮ್ಮನಾದ್ರು. ಸಾಮಾನ್ಯ ಜನರ ಧ್ವನಿಯಾಗಿ ಈ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದಾರೆ.