ನಾಗರಹಾವು ಮತ್ತು ಮುಂಗುಸಿ ಬದ್ಧ ವೈರಿಗಳು. ಇವುಗಳು ಕಾದಾಟಕ್ಕಿಳಿದರೆ ಸುಲಭಕ್ಕೆ ಮುಗಿಯುವಂಥದ್ದಲ್ಲ. ಮನುಷ್ಯನನ್ನು ಕೇವಲ 20 ನಿಮಿಷದಲ್ಲಿ ಕೊಲ್ಲುವಂತಹ ಉಗ್ರಶಕ್ತಿ ಇರುವ ನಾಗರಹಾವು ಮುಂಗುಸಿಗೆ ಹೆದರುತ್ತದೆ!
ಹಾವು ಮತ್ತು ಮುಂಗುಸಿಯ ನಡುವಿನ ಹೊಡೆದಾಟದ ವಿಡಿಯೋಗಳು ಅಂತರ್ಜಾಲದಲ್ಲಿ ಸಾಕಷ್ಟಿವೆ. ಆದರೆ ಮುಂಗುಸಿಯು ಗಾತ್ರಕ್ಕಿಂತ ದೊಡ್ಡದಾದ ನಾಗರಹಾವನ್ನು ಕೆಲವೇ ಸೆಕೆಂಡುಗಳಲ್ಲಿ ಹಿಡಿಯುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇದೀಗ ಅಂತಹದ್ದೊಂದು ವಿಡಿಯೋ ವೈರಲ್ ಆಗಿದೆ.

ಇನ್ನು ಕಾದಾಟದಲ್ಲಿ ನಾಗರಹಾವು ಮುಂಗುಸಿಯನ್ನು ಕಚ್ಚಿದರೂ ಮುಂಗುಸಿ ಬದುಕುಳಿಯುತ್ತದೆ. ಬಹುಪಾಲು ಸಂದರ್ಭದಲ್ಲಿ ಗೆಲುವು ಮುಂಗುಸಿಯದೇ. ಭಾರತದಲ್ಲಿರುವ ಮುಂಗುಸಿಗಳು ಸಾಮಾನ್ಯವಾಗಿ ನೋಡಲು ಬೂದು ಬಣ್ಣದಿಂದ ಕೂಡಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ನಾಗರಹಾವು ಮತ್ತು ಮುಂಗುಸಿಯ ಸೆಣಸಾಟದ ತೀವ್ರತೆ ಹೇಗಿದೆ ಎಂದು ನೋಡಬಹುದು.
