ಸೆಲ್ಫಿ ಕೇಳಲು ಬಂದ ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ದ ನಟ ನಾನಾ ಪಾಟೇಕರ್ (Nana Patekar) ಕೊನೆಗೂ ಕ್ಷಮೆ (Apologized) ಕೇಳಿದ್ದಾರೆ. ಶೂಟಿಂಗ್ ಸಮಯದಲ್ಲಿ ಫೋಟೋಗಾಗಿ ಅಭಿಮಾನಿಯೊಬ್ಬ ಪಾಟೇಕರ್ ಬಳಿ ಬಂದಿದ್ದ, ಅಭಿಮಾನಿಗೆ ಫೋಟೋ ಕೊಡುವ ಬದಲು, ಕಪಾಳಕ್ಕೆ ಬಾರಿಸಿದ್ದರು ನಾನಾ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ನಾನಾ ಪಾಟೇಕರ್ ಅಭಿಮಾನಿಯ ಕೆನ್ನೆಗೆ ಹೊಡೆದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಆ ವಿಡಿಯೋ ವೈರಲ್ ಕೂಡ ಆಗಿತ್ತು. ಅನೇಕರು ನಾನಾ ನಡೆಯನ್ನು ಖಂಡಿಸಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅದು ಸಿನಿಮಾದ ದೃಶ್ಯ ಎನ್ನುವಂತೆ ಬಿಂಬಿಸಲಾಗಿತ್ತು. ಆದರೆ, ಅದು ಸಿನಿಮಾದ ವಿಡಿಯೋ ಅಲ್ಲ ಎನ್ನುವುದನ್ನು ನಾನಾ ಒಪ್ಪಿಕೊಂಡಿದ್ದಾರೆ.
ಅಭಿಮಾನಿಗೆ ಹೊಡೆದಿರುವುದು ನನಗೂ ನೋವಾಗಿದೆ. ಅವರು ನನ್ನ ಸಿನಿಮಾ ತಂಡದವರು ಅಂದುಕೊಂಡಿದ್ದೆ. ಆ ನಂತರ ನಾನು ಅವರನ್ನು ಹುಡುಕಿ ಕ್ಷಮೆ ಕೇಳೋಣ ಅಂದುಕೊಂಡಿದ್ದೆ. ಆದರೆ, ಅವರು ಭಯದಿಂದ ಓಡಿದ್ದರು. ನನ್ನಿಂದ ತಪ್ಪಾಗಿದೆ ದಯವಿಟ್ಟು ಕ್ಷಮಿಸಿ. ನಾನು ಎಂದೂ ಆ ರೀತಿ ಮಾಡಿದವನು ಅಲ್ಲ ಎಂದು ನಾನಾ ಪಾಟೇಕರ್ ವಿಡಿಯೋವೊಂದನ್ನು ಮಾಡಿ ಕ್ಷಮೆ ಕೇಳಿದ್ದಾರೆ.