ಕೋಲಾರ : ದಾಯಾದಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯಕಂಡಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಪಡವನಹಳ್ಳಿಯಲ್ಲಿ ಘಟನೆ ನಡೆದಿದೆ.
ಮುನಿರಾಜು (35) ಕೊಲೆಯಾದ ವ್ಯಕ್ತಿ. ಬೋರ್ ವೆಲ್ ಲಾರಿ ಹಾಗು ಮೆಣಸಿನ ಗಿಡ ಹಾಳು ಮಾಡಿದ್ದಾರೆಂದು ಅಣ್ಣತಮ್ಮಂದಿರ ನಡುವೆ ಜಗಳ ನಡೆದಿದೆ. ಮಧ್ಯ ರಾತ್ರಿ 12 ಗಂಟೆ ಸುಮಾರಿಗೆ ದಾಯಾದಿಗಳ ಮಧ್ಯೆ ಗಲಾಟೆ ನಡೆದಿದ್ದು, ಈ ವೇಳೆ ಮುನಿರಾಜು ಎಂಬುವರ ಹತ್ಯೆಯಾಗಿದೆ.
ಪೊಲೀಸರ ಚೆಕ್ಕಿಂಗ್ ವೇಳೆ ಸಿಕ್ಕಿ ಬಿದ್ದ ಹಣ ಡಬ್ಲಿಂಗ್ ಮಾಡುತ್ತಿದ್ದ ವಂಚಕರು
ಅಣ್ಣಯ್ಯಪ್ಪ, ವೀರಸ್ವಾಮಿ, ಸೋಮಶೇಖರ್, ಕಾಂತರಾಜು, ಭರತ್, ವೆಂಕಟೇಶ್, ಭಾಗ್ಯಮ್ಮ ವಿರುದ್ದ ಕೊಲೆ ಆರೋಪ ಕೇಳಿ ಬಂದಿದೆ. ಮಾಲೂರು ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ಘಟನಾ ಸ್ಥಳಕ್ಕೆ ಕೋಲಾರ ಎಸ್ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಾಲೂರು ಠಾಣಾ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.