ಸಿರುಗುಪ್ಪ : ನಗರದ ಪೊಲೀಸ್ ವಸತಿ ಗೃಹದ ಹತ್ತಿರ ಪೊಲೀಸ್ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಎಂ.ಎಸ್.ಸೋಮಲಿ೦ಗಪ್ಪ ಭೂಮಿ ಪೂಜೆ ಸಲ್ಲ್ಲಿಸಿದರು.
ನಂತರ ಮಾತನಾಡಿದ ಅವರು ಈಗಿನ ಹಳೆಯ ಕಟ್ಟಡವು ಚಿಕ್ಕದಾಗಿದ್ದು ಹೆಚ್ಚುತ್ತಿದ್ದು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿರ್ವಹಿಸಲು ತೊಂದರೆಯಾಗುತ್ತಿದ್ದರಿ೦ದ ಸರ್ಕಾರವು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ದಿ ನಿಗಮ ನಿಯಮಿತದಿಂದ 2ಕೋಟಿ 82ಲಕ್ಷ ರೂ ಅನುದಾನದಲ್ಲಿ ನೂತನ ಪೊಲೀಸ್ ಠಾಣೆಯನ್ನು ನಿರ್ಮಿಸಲಾಗುತ್ತಿದೆ.
ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಿರ್ಮಿಸಬೇಕು, ಜಿಲ್ಲೆಯಲ್ಲಿ ಮಾದರಿ ಪೊಲೀಸ್ ಠಾಣೆಯಾಗಿರುವಂತೆ ಇರಬೇಕು, ರಾಜ್ಯ ಹೆದ್ದಾರಿಯಿಂದ 80 ಅಡಿ ಬಿಟ್ಟು ಕಟ್ಟಡ ನಿರ್ಮಿಸುವಂತೆ ತಿಳಿಸಿದರು.
5ಕೋಟಿ ವೆಚ್ಚದಲ್ಲಿ ಆದೋನಿ ರಸ್ತೆ ಅಭಿವೃದ್ದಿಗೆ ಸರ್ಕಾರವು ಮಂಜೂರು ಮಾಡಿದ್ದು ಶೀಘ್ರದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುತ್ತದೆ.
ಹಳೇ ಪೊಲೀಸ್ ಠಾಣೆಯ ಕಟ್ಟಡವನ್ನು ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಿ ಡಿ.ವೈ.ಎಸ್.ಪಿ. ಕಛೇರಿಯಾಗಿ ಪರಿವರ್ತಿಸಲು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗಿದೆ, ಶೀಘ್ರದಲ್ಲಿ ಪ್ರಾರಂಭಿಲಾಗುತ್ತದೆ೦ದು ತಿಳಿಸಿದರು.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಮಾತನಾಡಿ ಜಿಲ್ಲೆಯಲ್ಲಿ ಕೆಲವು ಠಾಣೆಗಳು ಇತರೆ ಇಲಾಖೆಯಲ್ಲಿ ಹಾಗೂ ಹಳೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಕುರಿತು ಸರಕಾರದ ಗಮನಕ್ಕೆ ತಂದು ಸಿರುಗುಪ್ಪ, ಬಳ್ಳಾರಿಯ ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆ, ಕಂಪ್ಲಿ ಪೊಲೀಸ್ ಠಾಣೆ, ಸಂಡೂರಿನ ಚೋರನೂರಿನಲ್ಲಿ ನೂತನ ಪೊಲೀಸ್ ಠಾಣೆ ನೂತನ ಕಟ್ಟಡದಲ್ಲಿ ಅತ್ಯಾಧುನಿಕ ಸೌಕರ್ಯಗಳೊಳಗೊಂಡ೦ತೆ ಸುಸಜ್ಜಿತವಾಗಿ ಮುಂದಿನ ಡಿಸೆಂಬರ್ ಒಳಗಾಗಿ ನಿರ್ಮಿಸಲಾಗುತ್ತದೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ವಿಭಾಗದ ಡಿವೈಎಸ್‌ಪಿ ಎಂ.ಜಿ.ಸತ್ಯನಾರಾಯಣರಾವ್, ಸಿಪಿಐಗಳಾದ ಯಶವಂತ.ಹ.ಬಿಸನಳ್ಳಿ, ಕಾಳಿಕೃಷ್ಣ, ಪಿಎಸ್‌ಐ ರಂಗಪ್ಪ, ಅಪರಾಧ ವಿಭಾಗದ ಪಿ.ಎಸ್.ಐ ನಾರಾಯಣಸ್ವಾಮಿ, ಎ.ಎಸ್.ಐ ಗಳಾದ ಪಂಪಾಪತಿ, ಸೂರ್ಯನಾರಾಯಣ, ಸೇರಿದಂತೆ ಮುಖಂಡರು, ಸಿಬ್ಬಂದಿಗಳು ಇದ್ದರು.
