ಸಿರುಗುಪ್ಪ : ನಗರದ ತಾಲೂಕು ಕಛೇರಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಸಮಿತಿಯಿಂದ ಭತ್ತ ಖರೀದಿ ಕೇಂದ್ರದ ಆನ್‌ಲೈನ್ ಕೇಂದ್ರದಲ್ಲಿ ಕಳೆದ ಮೇ ತಿಂಗಳಿನಲ್ಲಿ ನೊಂದಣಿಯಾದ ರೈತರ ಹೆಸರನ್ನು ಡಿಲೆಟ್ ಮಾಡುವಂತೆ ಒತ್ತಾಯಿಸಿ ತಹಶೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಜೆ.ಸಿದ್ದರಾಮನಗೌಡ ಮಾತನಾಡಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿರುವ ಭತ್ತ ಖರೀದಿ ಕೇಂದ್ರದಲ್ಲಿ ಕಳೆದ ಮೇ ತಿಂಗಳಿನಲ್ಲಿ ಆನ್‌ಲೈನ್ ಮೂಲಕ ಸುಮಾರು 833 ಜನ ರೈತರ ಹೆಸರುಗಳನ್ನು ನೊಂದಾಯಿಸಲಾಗಿದ್ದು, ಇದಕ್ಕೆ ಸಂಬAದಿಸಿದ ಅಧಿಕಾರಿಗಳು ಇದುವರೆಗೂ ರೈತರ ಹತ್ತಿರ ಖರೀದಿ ಮಾಡದೇ ಸರ್ಕಾರಕ್ಕೆ ಸುಳ್ಳು ದಾಖಲೆ ಸಲ್ಲಿಸಿ ರೈತರಿಗೆ ಹಾರಿಕೆ ಉತ್ತರ ನೀಡುತ್ತಿದ್ದು ರೈತರು ಭತ್ತ ಖರೀದಿ ಕೇಂದ್ರಕ್ಕೆ ಅಲೆದಾಡುವಂತಾಗಿದೆ.
ಇದೇ 2021 ನವೆಂಬರ್‌ನಲ್ಲಿ ಭತ್ತ ಖರೀದಿ ಕೇಂದ್ರದಿ೦ದ ಪುನ: ಖರೀದಿ ಆರಂಬಿಸಿದಾಗ ರೈತರು ನೊಂದಣಿ ಮಾಡಿಸಲು ಕೇಂದ್ರಕ್ಕೆ ಹೋದರೆ ಗಣಕಯಂತ್ರದಲ್ಲಿ ನಿಮ್ಮ ಹೆಸರು ನೊಂದಣಿಯಾಗುತ್ತಿಲ್ಲವೆAದು ಕಾರಣ ಕೇಳಿದರೆ ಮೇ ತಿಂಗಳಿನಲ್ಲಿ ನಿಮ್ಮ ಹೆಸರು ನೊಂದಣಿಯಾಗಿರುವುದರಿ೦ದ ಈಗ ನೊಂದಣಿಯಾಗುತ್ತಿಲ್ಲವೆ೦ದು ಸಬೂಬು ನೀಡುತ್ತಿದ್ದಾರೆ.
ಆದ್ದರಿಂದ ತಹಶೀಲ್ದಾರರು 2021ರ ಮೇ ತಿಂಗಳಲ್ಲಿ ನೊಂದಣಿಯಾದ ರೈತರ ಹೆಸರುಗಳನ್ನು ನೊಂದಣಿ ಕೇಂದ್ರದಿ೦ದ ತೆಗೆದುಹಾಕಿ ಪ್ರಸ್ತುತ ಬೆಳೆಯನ್ನು ಖರೀದಿ ಮಾಡಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ತಾ.ಕ.ಪ್ರಾಂ.ರೈ. ಸಂಘದ ಅಧ್ಯಕ್ಷ ವಿ.ಮಾರುತಿ, ಮುಖಂಡರಾದ ಓಬಳೇಶಪ್ಪ, ಬಿ.ನಾಗರಾಜ, ಬಿ.ಈರಣ್ಣ, ಎ.ಸರ್ದಾರ, ಖಾದರಲಿಂಗ ಇದ್ದರು.
