ಚಿಕ್ಕಬಳ್ಳಾಪುರ: ತನ್ನ ಅನೈತಿಕ ಸಂಬಂಧಗಳಿಗೆ ತನ್ನ ತಂಗಿ ಅಡ್ಡಿಯಾಗಿದ್ದಾಳೆ ಅಂತ ಕೋಪಗೊಂಡ ಅಕ್ಕ, ತಂಗಿಯ 6 ವರ್ಷದ ಮಗನನ್ನು ಕೊಂದು ಶವವನ್ನು ಹೂತು ಹಾಕಿ ಏನು ಆಗಿಲ್ಲ ಎನ್ನುವ ಹಾಗೆ ಇನ್ನೊಬ್ಬ ಮಗಳ ಜೊತೆ ಎಸ್ಕೇಪ್ ಆಗಿದ್ದಳು, ಆದ್ರೆ ಆಟೊ ಚಾಲಕನ ಸಮಯ ಪ್ರಜ್ಞೆಯಿಂದ ಕ್ರಿಮಿನಲ್ ಲೇಡಿ ನೇರವಾಗಿ ಪೊಲೀಸ್ ಠಾಣೆ ಸೇರಿದ್ದಾಳೆ. ಅಷ್ಟಕ್ಕೂ ಅದೇಲ್ಲಿ ಅಂತೀರಾ ಈ ವರದಿ ನೋಡಿ!!
ಹೀಗೆ… ಮಾವಿನ ತೋಪಿನಲ್ಲಿ, ಪೊಲೀಸರು ಹಾಗೂ ಸ್ಥಳಿಯರು ಆರು ವರ್ಷದ ಕಂದನ ಕಳೆಬರಹಕ್ಕಾಗಿ ಶೋಧಕಾರ್ಯ ನಡೆಸಿರುವುದು ಚಿಕ್ಕಬಳ್ಳಾಪುರ ತಾಲೂಕುನ ಮುತ್ತಕದಹಳ್ಳಿ ಗ್ರಾಮದ ಬಳಿ ಇರುವ ಮಾವಿನ ತೋಪಿನಲ್ಲಿ. ಮುತ್ತಕದಹಳ್ಳಿ ಗ್ರಾಮದ ಅನಿತಾಳ 8 ವರ್ಷದ ಮನುಶ್ರೀ ಹಾಗೂ 6 ವರ್ಷದ ಬಾಲಕ ಮಧು ನಿನ್ನೆ ಮದ್ಯಾನ್ಹ ಗ್ರಾಮದಿಂದ ನಾಪತ್ತೆಯಾಗಿದ್ರು. ಇತ್ತ ಪೆರೇಸಂದ್ರ ಪೊಲೀಸರು ಹಾಗೂ ಮಕ್ಕಳ ಸಂಬಂಧಿಗಳು ಮಕ್ಕಳಿಗಾಗಿ ಶೋಧಕಾರ್ಯ ನಡೆಸಿರುವಾಗಲೇ… ಅತ್ತ ಬೆಂಗಳೂರಿನ ಕಬ್ಬನ್ ಪಾರ್ಕ ಠಾಣೆ ಪೊಲೀಸರು,
ಠಾಣೆಗೆ ಮುತ್ತಕದಹಳ್ಳಿ ಗ್ರಾಮದ ನಿವಾಸಿ ಅಂಬಿಕಾ ಹಾಗೂ ಆಕೆಯ ಜೊತೆ 8 ವರ್ಷದ ಬಾಲಕಿಯೊರ್ವಳು ಇದ್ದು, ,ಮಹಿಳೆಯ ನಡೆ ಅನುಮಾನ ಮೂಡಿಸುವಂತಿದೆ, ಆಟೊ ಚಾಲಕನೊರ್ವ ನೇರವಾಗಿ ಇಬ್ಬರನ್ನು ಠಾಣೆಗೆ ಕರೆ ತಂದಿರುವುದಾಗಿ ತಿಳಿಸಿದ್ದಾರೆ. ಅಂಬಿಕಾಳನ್ನು ಪೆರೇಸಂದ್ರಠಾಣೆಗೆ ಕರೆ ತಂದು ವಿಚಾರ ಮಾಡುತ್ತಿದ್ದಂತೆ, ಅಂಬಿಕಾ ಮಾಡಿತ ಕಿತಾಪತಿಯನ್ನು ಬಾಯಿ ಬಿಟ್ಟಿದ್ದಾಳೆ. ತನ್ನ ತಂಗಿ ಮಗ ಮಧುವನ್ನು ಕೊಂದು ಮಾವಿನ ತೋಪಿನಲ್ಲಿ ಹೂತು ಹಾಕಿದ್ದಾಗಿ ಬಾಯಿ ಬಿಟ್ಟಿದ್ದಾಳೆ.
ಇದ್ರಿಂದ ಎಚ್ಚೇತ್ಥ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ರೆ… ಮಗು ಕೊಂದು ಹೂತು ಹಾಕಿರುವ ಕುರುಹುಗಳು ಇವೆ, ಇದ್ರಿಂದ ಮಗುವಿನ ಕಳೆಬರಹ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಅಸಲಿಗೆ ಅನಿತಾ ಅಂಬಿಕಾ ಇಬ್ಬರು ಅಕ್ಕತಂಗಿಯರು. ಅಂಬಿಕಾ ಗಂಡ ಮಕ್ಕಳಿಂದ ದೂರವಾಗಿ ಅನೈತಿಕ ಸಂಬಂಧಗಳು, ವೇಶ್ಯವಾಟಿಕೆ ಅಂತೆಲ್ಲಾ ತಿರುಗಾಡುತ್ತಿದ್ದಾಳೆ, ಇದ್ರಿಂದ ಅನಿತಾ ಅಕ್ಕನಿಗೆ ಬುದ್ದಿ ಹೇಳಿ, ಅನೈತಿಕ ಸಂಬಂಧಗಳಿಗೆ ಬ್ರೆಕ್ ಹಾಕು ಯತ್ನಿಸಿದ್ದಳು,
ಇದ್ರಿಂದ ಅಸಮಧಾನಗೊಂಡ ಪಾಪಿ ಅಂಬಿಕಾ ತಂಗಿಯ ಮಕ್ಕಳಿಬ್ಬರನ್ನು ಕೊಲ್ಲಲು ಮಾವಿನ ತೋಪಿಗೆ ಕರೆದುಕೊಂಡು ಹೋಗಿದ್ದಾಳೆ, ಅಲ್ಲಿ ಮಗನನ್ನು ಕೊಂದು ಹೂತು ಹಾಕಿದ್ದಾಳೆ, 8 ವರ್ಷದ ಮಗಳನ್ನು ಕೊಲ್ಲಲು ದೈರ್ಯ ಸಾಲದೆ ಕೊನೆಗೆ ವಾಪಸ್ ಪೆರೆಸಂದ್ರ ಗ್ರಾಮಕ್ಕೆ ಆಗಮಿಸಿ, ಬಸ್ ಮೂಲಕ ಬೆಂಗಳೂರಿಗೆ ಹೋಗಿದ್ದಾಳೆ. ಅಲ್ಲಿ ಆಟೊ ಚಾಲಕನ ಮೂಲಕ ಪೊಲೀಸರಿಗೆ ಸಿಕ್ಕಿದ್ದಾಳೆ. ಗಂಡ ಮಕ್ಕಳು ಇದ್ರೂ ನ್ಯಾಯವಾಗಿ ಸಂಸಾರ ನಡೆಸದ ಪಾಪಿ ಅಂಬಿಕಾ… ಬುದ್ದಿವಾದ ಹೇಳಿದ ತಂಗಿಯ ಮಕ್ಕಳನ್ನು ಕೊಲ್ಲಲು ಸ್ಕೇಚ್ ಹಾಕಿ ಕೊನೆಗೆ ಮುದ್ದಾಗ ತಂಗಿಯ ಮಗನ್ನು ಕೊಂದು ಈಗ ಪೊಲೀಸರ ಅತಿಥಿಯಾಗಿದ್ದಾಳೆ.