ಬೆಂಗಳೂರು: ಮೂರನೇ ದಿನದ ನೈಟ್ ಕರ್ಫ್ಯೂನಲ್ಲಿ ಸಿಲಿಕಾನ್ ಸಿಟಿ ಮಂದಿ ಬೇಕಾಬಿಟ್ಟಿ ತಿರುಗಾಡಿದ್ದಾರೆ. ರಾತ್ರಿ 11 ಗಂಟೆಯಾದರೂ ನಗರದ ಪ್ರಮುಖ ರಸ್ತೆಗಳಲ್ಲಿ ಎಂದಿನಂತೆ ವಾಹನ ಸಂಚಾರ ಕಂಡು ಬಂದಿದ್ದು, ನಗರದಲ್ಲಿ ಮೂರು ದಿನಗಳಿಂದಲೂ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನ ತಪಾಸಣೆ ನಡೆಸುತ್ತಿದ್ದಾರೆ.
ಆದರೆ ವಾಹನ ಸಂಚಾರದಲ್ಲಿ ಮಾತ್ರ ಯಾವುದೇ ಇಳಿಕೆ ಕಂಡುಬಂದಿಲ್ಲ. ಇನ್ನೂ ನೃಪತುಂಗ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಓಡಾಟವನ್ನು ನಡೆಸಿದ್ದು, ಎಂದಿನಂತೆ ಹೆಸರಿಗೆ ಮಾತ್ರ ಪೊಲೀಸರು ಚೆಕ್ ಮಾಡಿ ಕಳುಹಿಸಿದ್ದಾರೆ. ಇದರಿಂದ ನ್ಯೂ ಇಯರ್ ಕರ್ಫೂ ಕಾಟಾಚಾರದ ನೈಟ್ ಕರ್ಫ್ಯೂ ಎಂಬಂತೆ ಕಂಡು ಬಂದಿದೆ.
