ಪ್ರಪಂಚದ ಅತಿಹೆಚ್ಚು ಬೇಡಿಕೆಯ ಇನ್ಸ್ಟಾಂಟ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಆಗಾಗ ಹೊಸ ಫೀಚರ್ಗಳನ್ನು ತನ್ನ ಬಳಕೆದಾರರಿಗೆ ನೀಡುತ್ತಲೇ ಇರುತ್ತದೆ. ಆ ಸಾಲಿಗೆ ಇದೀಗ ಮತ್ತೊಂದು ಹೊಸ ಫೀಚರ್ ಅನ್ನು ಅಪ್ಡೇಟ್ ಮಾಡಿದೆ.
ಅಪರಿಚಿತ ನಂಬರ್ಗಳಿಂದ ಹೆಚ್ಚಾದ ಸ್ಪ್ಯಾಮ್ ಕರೆಗಳ ಕಾರಣ, ಮೆಟಾ ಕಂಪನಿಯು ವಾಟ್ಸಾಪ್ನಲ್ಲಿ ಹೊಸ ಫೀಚರ್ ಪರಿಚಯಿಸಿದ್ದು, ಈ ಫೀಚರ್ ಯಾವುದೇ ಅಪರಿಚಿತ ನಂಬರ್ಗಳಿಂದ ಕರೆ ಬಂದರೂ ಸಹ ಸ್ವಯಂಚಾಲಿತವಾಗಿ ಮ್ಯೂಟ್ ಮಾಡಲಿದೆ. ಈ ಹೊಸ ಫೀಚರ್ನಿಂದ ಬಳಕೆದಾರರ ಗೌಪ್ಯತೆಯನ್ನು ನಿಯಂತ್ರಿಸಲು ಸಾಧ್ಯವಾಗಿದೆ ಎಂದು ಮೆಟಾ ಕಂಪನಿಯು ಇನ್ಸ್ಟಾಗ್ರಾಂನಲ್ಲಿ ಹೇಳಿದೆ.

ಬಳಕೆದಾರರು ತಮ್ಮ ಆಂಡ್ರಾಯ್ಡ್ ಹಾಗೂ ಐಓಎಸ್ಗಳಲ್ಲಿ ಈಗಲೇ ಅಪ್ಡೇಟ್ ಮಾಡುವುದರೊಂದಿಗೆ ಹೊಸ ಫೀಚರ್ ಅನ್ನು ಟೆಸ್ಟ್ ಸಹ ಮಾಡಬಹುದಾಗಿದೆ. ವಾಟ್ಸಾಪ್ ಪ್ರೈವೆಸಿ ಸೆಟ್ಟಿಂಗ್ನಲ್ಲಿ ಈ ಫೀಚರ್ ಎನೇಬಲ್ ಮಾಡುವುದರಿಂದ ಯಾವುದೇ ಅಪರಿಚಿತ ನಂಬರ್ಗಳಿಂದ ಕರೆ ಬಂದರೂ ಸಹ ಸ್ವಯಂಚಾಲಿತವಾಗಿ ಕರೆ ಸೈಲೆಂಟ್ ಆಗಲಿದೆ.
ಈ ಹೊಸ ಫೀಚರ್ ಬಳಸಲು ಮೊದಲಿಗೆ ಬಳಕೆದಾರರು ತಮ್ಮ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಅಪ್ಡೇಟ್ ಮಾಡಬೇಕು. ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್, ಗ್ಯಾಲಕ್ಸಿ ಎಸ್23 ಅಲ್ಟ್ರಾ ಮತ್ತು ರಿಯಲ್ಮಿ 11 ಪ್ರೊ+ ಗಳಲ್ಲಿನ ಸ್ಟೆಬಲ್ ವರ್ಷನ್ ವಾಟ್ಸಾಪ್ಗಳಲ್ಲಿ ಈ ಫೀಚರ್ ಬಳಸಲು ಸಾಧ್ಯ. ಹಾಗಂತ ಇಷ್ಟೇ ಸ್ಮಾರ್ಟ್ಫೋನ್ಗಳಲ್ಲಿ ಮಾತ್ರ ಫೀಚರ್ ಬಳಕೆ ಸಾಧ್ಯ ಅಂತಲ್ಲ. ಬಳಕೆದಾರರು ತಮ್ಮಲ್ಲಿರುವ ಯಾವುದೇ ಸ್ಮಾರ್ಟ್ಫೋನ್ ಅನ್ನು ಒಮ್ಮೆ ಅಪ್ಡೇಟ್ ಮಾಡಿ, ಫೀಚರ್ ಲಭ್ಯತೆ ಬಗ್ಗೆ ಚೆಕ್ ಮಾಡಿಕೊಳ್ಳಬಹುದಾಗಿದೆ.
Silence Unknown Callers ಫೀಚರ್ ಎನೇಬಲ್ ಮಾಡುವುದು ಹೇಗೆ?
– ನಿಮ್ಮ ಮೊಬೈಲ್ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಓಪನ್ ಮಾಡಿ.
– 3 ಡಾಟ್ಗಳಿರುವಲ್ಲಿ ಕ್ಲಿಕ್ ಮಾಡುವ ಮೂಲಕ ‘Settings’ ಆಯ್ಕೆ ಮೇಲೆ ಟ್ಯಾಪ್ ಮಾಡಿ.
– ನಂತರ ‘Privacy’ ಎಂದಿರುವಲ್ಲಿ ಕ್ಲಿಕ್ ಮಾಡಿ. ಮತ್ತೊಂದು ಸ್ಕ್ರೀನ್ ಓಪನ್ ಆಗುತ್ತದೆ.
– ಇಲ್ಲಿ ‘Calls- Silence Unknown Callers’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ನಂತರ ಮತ್ತೊಂದು ಸ್ಕ್ರೀನ್ ತೆರೆಯುತ್ತದೆ. ಇಲ್ಲಿ ಸದರಿ ಫೀಚರ್ ಅನ್ನು ಆನ್ ಮಾಡಿರಿ.
ಇದರಿಂದ ನಿಮಗೆ ಅಪರಿಚಿತ ನಂಬರ್ಗಳಿಂದ ಬರುವ ಸ್ಪ್ಯಾಮ್ ಕರೆಗಳು ಮ್ಯೂಟ್ ಆಗುತ್ತವೆ. ಪದೇ ಪದೇ ಉಂಟಾಗುವ ಕಿರಿ ಕಿರಿಯೂ ತಪ್ಪುತ್ತದೆ.
