ಲಾಸ್ ಏಂಜಲೀಸ್: ಆಸ್ಕರ್ ವಿಜೇತ ಮೊದಲ ಕಪ್ಪುವರ್ಣೀಯ ಬಹಮಿಯನ್-ಅಮೆರಿಕನ್ ನಟ ಸಿಡ್ನಿ ಪೊಯ್ಟಿಯರ್ (94) ನಿಧನ ರಾಗಿದ್ದಾರೆ. 1963ರಲ್ಲಿ ʻಲಿಲೀಸ್ ಆಫ್ ದಿ ಫೀಲ್ಡ್ʼ ಚಲನಚಿತ್ರ ತೆರೆಕಂಡು ದೊಡ್ಡ ಮೈಲಿಗಲ್ಲನ್ನೇ ಸೃಷ್ಟಿಸಿತು. ಸಿನಿಮಾದಲ್ಲಿ ಸಿಡ್ನಿ ಅವರ ಅತ್ಯುತ್ತಮ ನಟನೆಗೆ ಆಸ್ಕರ್ ಒಲಿಯಿತು.
ಸಿನಿಮಾರಂಗದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ಮೊದಲ ಕಪ್ಪು ವರ್ಣೀಯ ಎಂಬುದು ಮತ್ತೊಂದು ಇತಿಹಾಸ. ಪೊಯ್ಟಿಯರ್ ಒಬ್ಬ ಐಕಾನ್, ಹೀರೋ, ಮಾರ್ಗದರ್ಶಕ, ಹೋರಾಟಗಾರ, ನಿರ್ದೇಶಕ ಎಂದು ಬಹಮಿಯನ್ ಉಪ ಪ್ರಧಾನಿ ಚೆಸ್ಟರ್ ಕೂಪರ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.
