ಬೆಂಗಳೂರು:- ಸಿಎಂ ಸಿದ್ದರಾಮಯ್ಯ ಕನಸಿನ ಕೂಸಿಗೆ ಕಾಂಗ್ರೆಸ್ ಸರ್ಕಾರದಿಂಲೇ ಎಳ್ಳು ನೀರು ಬಿಡುವಂತಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರದ ಯೋಜನೆ ಹಳ್ಳ ಹಿಡಿದಿವೆ ಎಂದು ಬೊಬ್ಬೆ ಹೊಡೆದ್ದಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಕಾಂಗ್ರೆಸ್ ಸರ್ಕಾರದಿಂದಲ್ಲೇ ಎಳ್ಳು ನೀರು ಬಿಡಲಾಗುತ್ತಿದೆ.
ನಗರದಲ್ಲಿ ಕಳೆದ ಎರಡೂ ಮೂರು ದಿನಗಳಿಂದ ಹಲವು ಕಡೆ ಇಂದಿರಾ ಕ್ಯಾಂಟೀನ್ ಬಂದ್ ಮಾಡಲಾಗಿದೆ. ಮೊಬೈಲ್ ಕ್ಯಾಂಟೀನ್ ಸೇರಿ ಮೂವತ್ತಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್ ಗಳಿಗೆ ಬೀಗ ಹಾಕಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊದಗಿಸಲು ಹೋಗಿ ಕ್ಯಾಂಟೀನ್ ಕೈ ಬಿಟ್ರಾ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಗ್ಯಾರಂಟಿ ಯೋಜನೆ ಜಾರಿಯಿಂದ ಕ್ಯಾಂಟೀನ್ ಗೆ ಅನುದಾನ ಒದಗಿಸಲು ಆಗ್ಲಿಲ್ವಾ ಎನ್ನುವ ಪ್ರಶ್ನೆ ಉದ್ಭವಿಸಿದ್ದು, ಇನ್ನೂ 90 ಕೋಟಿ ಯಷ್ಟು ಬ್ಯಾಲೆನ್ಸ್ ಉಳಿಸಿಕೊಂಡಿರುವ ಕಾರಣಕ್ಕಾಗಿ ಕ್ಲೋಸ್ ಆದ್ವಾ ಇಂದಿರಾ ಕ್ಯಾಂಟೀನ್ ಎನ್ನುವಂತಾಗಿದೆ. ಸದ್ಯ ಬಿಬಿಎಂಪಿ ಅಧಿಕಾರಿಗಳ ಮಾಹಿತಿ ಪ್ರಕಾರ ಹಣ ಬಿಡುಗಡೆ ಆಗಿಲ್ಲ ಹೀಗಾಗಿ ಕ್ಯಾಂಟೀನ್ ಕ್ಲೋಸ್ ಆಗಿವೆಯಂತೆ.
ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ 180 ಕ್ಯಾಂಟೀನ್ ಗಳ ಪೈಕಿ 30 ಕ್ಯಾಂಟೀನ್ ಗಳು ಬಾಗಿಲು ಬಂದ್ ಆಗಿವೆ. ಸಿದ್ದರಾಮಯ್ಯ ಕನಸಿನ ಕೂಸಿಗೆ ತಣ್ಣಿರು ಎರಚ್ಚಿತ ಗ್ಯಾರಂಟಿ ಯೋಜನೆಗಳು ಎನ್ನುವಂತಾಗಿದೆ.
ಗ್ಯಾರಂಟೀ ಯೋಜನೆ ಜಾರಿಯಿಂದ ಇಂದಿರಾ ಕ್ಯಾಂಟೀನ್ ಮೊದಲ ಬಲಿ ಆಯ್ತಾ ಎನ್ನುವಂತಾಗಿದೆ. ಸದ್ಯ ಗಮನಕ್ಕಿದೆ ಸರಿಪರಿಸುವುದಾಗಿ ಅಧಿಕಾರಿ ಭರವಸೆ ನೀಡಿದ್ದು, ಸ್ವಲ್ಪ ದಿವಸ ಸಮಯವಾಕಾಶ ಬೇಕೆಂದು ಅಧಿಕಾರಿ ಕೇಳಿದ್ದಾರೆ ಎಂದು ರೆಡ್ಡಿ ಶಂಕರ್ ಬಾಬು ವಿಶೇಷ ಆಯುಕ್ತರು ಹೇಳಿದ್ದಾರೆ.