ಬೆಂಗಳೂರು: ಮೂಡಾ ಪ್ರಕರಣದಲ್ಲಿ ಸಿಎಂ ಸಿದ್ರಾಮಯ್ಯ ಸಿಲುಕಿದ್ದೇ ತಡ ಇತ್ತ ಸಿಎಂ ಕುರ್ಚಿಯ ಮೇಲೆ ಹಲವರ ಕಣ್ಣು ಬಿದ್ದಿದೆ.ಮೇಲ್ನೋಟಕ್ಕೆ ಬೆಂಬಲ ವ್ಯಕ್ತಪಡಿಸಿದ್ರೂ ಒಳಗೊಳಗೇ ಸಿಎಂ ಕುರ್ಚಿಗೆ ಪೈಪೋಟಿ ಶುರುಮಾಡಿದ್ದಾರೆ.ಪದೇ ಪದೇ ದೆಹಲಿಗೆ ಹೋಗ್ತಿದ್ದಾರೆ.ಹೈಕಮಾಂಡ್ ನಾಯಕರನ್ನ ಭೇಟಿ ಮಾಡ್ತಿದ್ದಾರೆ.ಒಂದು ವೇಳೆ ಕೋರ್ಟ್ ನಲ್ಲಿ ಏನಾದ್ರೂ,ವ್ಯತಿರಿಕ್ತ ತೀರ್ಪು ಬಂದ್ರೆ ನಮ್ಮನ್ನ ಪರಿಗಣಿಸಿ ಅಂತ ರಾಹುಲ್,ಖರ್ಗೆ ಮುಂದೆ ಮನವಿ ಸಲ್ಲಿಸ್ತಿದ್ದಾರೆ.ಈ ಕಾವು ಮತ್ತಷ್ಟು ಜೋರಾಗ್ತಿದೆ.
ಯೆಸ್..ಸಿಎಂ ಸಿದ್ರಾಮಯ್ಯನವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ನೀಡಿದ್ದೇ ತಡ ಕಾಂಗ್ರೆಸ್ ನೊಳಗೆ ರಹಸ್ಯ ರಾಜಕೀಯ ಬೆಳವಣಿಗೆಗಳು ನಡೆದಿವೆ.ಹೈಕಮಾಂಡ್ ಸೂಚನೆಯಂತೆ ಮೇಲ್ನೋಟಕ್ಕೆ ಸಿಎಂಗೆ ಬೆಂಬಲವ್ಯಕ್ತಪಡಿಸಿದ್ರೂ ಒಳಗೊಳಗೆ ಸಿಎಂ ಕುರ್ಚಿಯ ಮೇಲೆ ಹಲವರು ಕಣ್ಣಿಟ್ಟಿರೋದು ಗುಟ್ಟಾಗಿಯೇನು ಉಳಿದಿಲ್ಲ.ಈ ಮೊದಲು ಮೊದಲು ಸಿದ್ರಾಮಯ್ಯ ಆನಂತರ ಡಿಕೆಶಿಗೆ ಸಿಎಂ ಪಟ್ಟ ಎನ್ನುವ ಚರ್ಚೆಗಳು ಇದ್ವು.ಆದ್ರೆ ಈಗ ವಾತಾವರಣವೇ ಬದಲಾಗಿ ಹೋಗಿದೆ.ಒಂದು ವೇಳೆ ಕೋರ್ಟ್ ನಲ್ಲಿ ಏನಾದ್ರೂ ಸಿಎಂ ವಿರುದ್ಧವಾಗಿ ವ್ಯತಿರಿಕ್ತ ತೀರ್ಪು ಬಂದಿದ್ದೇ ಆದ್ರೆ ಆಗ ನಮ್ಮನ್ನ ಪರಿಗಣಿಸಿ ಅಂತ ವರಿಷ್ಠರಿಗೆ ಬೇಡಿಕೆ ಇಟ್ಟಿದ್ದಾರೆ.ಅದ್ರಲ್ಲೂ ಸಿಎಂ ಸ್ಥಾನಕ್ಕೆ ಯಾವಾಗ ಮಲ್ಲಿಕಾರ್ಜುನ ಖರ್ಗೆಯವರು ಹೆಸರು ತೇಲಿಬಂತೋ ಆಗಲೇ ಹಿರಿಯ ಹಾಗೂ ದಲಿತ ನಾಯಕರಾದ ಪರಮೇಶ್ವರ್,ಸತೀಶ್ ಜಾರಕಿಹೊಳಿ ಎಸ್ಸಿಎಸ್ಟಿ ಕೋಟಾದಡಿ ಸಿಎಂ ಸೀಟು ಗಿಟ್ಟಿಸೋಕೆ ಪ್ರಯತ್ನ ನಡೆಸಿದ್ದಾರೆ..ಪದೇ ಪದೇ ದೆಹಲಿಗೆ ಭೇಟಿ ಕೊಡ್ತಿದ್ದಾರೆ..ವರಿಷ್ಠರನ್ನ ಭೇಟಿ ಮಾಡಿ ಮನವಿ ಸಲ್ಲಿಸ್ತಿದ್ದಾರೆ.
ಇನ್ನು ಸಿದ್ರಾಮಯ್ಯನವರ ಮೂಡಾ ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಲೇ ಹೈಕಮಾಂಡ್ ಕೂಡ ಚಿಂತೆಗೆ ಬಿದ್ದಿದೆ.ಒಂದು ವೇಳೆ ಸಿದ್ರಾಮಯ್ಯ ಇದ್ರಲ್ಲಿ ಸಿಲುಕಿದ್ದೇ ಆದ್ರೆ ಮುಂದೇನು ಅನ್ನೋ ಅಲೋಚನೆಯಲ್ಲಿದೆ.ಸಿಎಂ ಕುರ್ಚಿಗೆ ಡಿಕೆಶಿ ರೆಡಿಯಿದ್ರೂ ಅವರನ್ನ ಪ್ರಸ್ತುತ ಸಂದರ್ಭದಲ್ಲಿ ಸಿಎಂ ಮಾಡೋಕೆ ಹೈಕಮಾಂಡ್ ಗೆ ಇಷ್ಟವಿಲ್ಲವಂತೆ.ಯಾಕಂದ್ರೆ ಐಟಿ,ಇಡಿ ಕೇಸುಗಳು ಡಿಕೆ ಮೇಲೆ ಇರೋದ್ರಿಂದ ಸಿಎಂ ಮಾಡಿದ್ದೇ ಆದ್ರೆ ಕೇಂದ್ರ ಸರ್ಕಾರ ಯಾವಾಗ ಬೇಕಾದ್ರೂ ಅವರ ಮೇಲಿನ ತನಿಖೆಗೆ ವೇಗ ನೀಡಬಹುದು.ಅಂತಹ ಸನ್ನಿವೇಶ ಎದುರಾಗಿದ್ದೇ ಆದ್ರೆ ಆಗ ಪಕ್ಷ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ.ಹಾಗಾಗಿ ನ್ಯಾಯಾಲಯದ ಕುಣಿಕೆಯಿಂದ ಸಿದ್ರಾಮಯ್ಯ ಪಾರಾಗಿದ್ದೇ ಆದ್ದೆ ಅವರನ್ನೇ ಐದು ವರ್ಷ ಮುಂದುವರಿಸುವ ಆಲೋಚನೆಯಿದೆ.ಯಾಕಂದ್ರೆ ಕೇಂದ್ರ ಪ್ರಧಾನಿ,ಅಮಿತ್ ಶಾ ಅವರನ್ನ ಸಮರ್ಥವಾಗಿ ಎದುರಿಸುವ ತಾಕತ್ತು ಅವರಿಗೆ ಮಾತ್ರ ಇದೆ ಅನ್ನೋದು ಹೈಕಮಾಂಡ್ ಗೂ ಗೊತ್ತಿದೆ.ಒಂದು ವೇಳೆ ವ್ಯತಿರಿಕ್ತ ತೀರ್ಪು ಬಂದಿದ್ದೇ ಆದ್ರೆ ಸಿದ್ರಾಮಯ್ಯನವರನ್ನ ಮನವೊಲಿಸಿ ಅವರನ್ನ ಕೆಳಗಿಳಿಸುವ ಲೆಕ್ಕಾಚಾರವೂ ಇದೆಯಂತೆ.ಆಗ ಅಲ್ಟರ್ ನೆಟೀವ್ ಆಗಿ ಆಕುರ್ಚಿಗೆ ಯಾರನ್ನ ಕೂರಿಸಬಹುದು ಎಂಬ ಆಲೋಚನೆ ಹೈಕಮಾಂಡ್ ತಲೆಯಲ್ಲಿದೆಯಂತೆ
ಇನ್ನು ಖರ್ಗೆಯವರನ್ನ ಸಿಎಂ ಸ್ಥಾನದಲ್ಲಿ ಕೂರಿಸುವ ಬಗ್ಗೆ ಕಾಂಗ್ರೆಸ್ ಮನೆಯಲ್ಲಿ ಚರ್ಚೆ ನಡೆದಿತ್ತು.ಆದ್ರೆ,ಖರ್ಗೆಯವರನ್ನ ಕೂರಿಸಿದ್ರೆ ರಾಷ್ಟ್ರ ರಾಜಕಾರಣದಲ್ಲಿ ಇಂಡಿಯಾ ಒಕ್ಕೂಟವನ್ನ ಮುನ್ನಡೆಸುವವರು ಇಲ್ಲದಂತಾಗುತ್ತದೆ.ಆ ಕಾರಣಕ್ಕಾಗಿಯೇ ಪರಮೇಶ್ವರ್ ಅವರನ್ನ ಕೂರಿಸಬಹುದೆಂಬ ಚರ್ಚೆ ದೆಹಲಿ ಮಟ್ಟದಲ್ಲಿದೆ.ಪರಂ ದಲಿತ ಸಮುದಾಯಕ್ಕೆ ಸೇರಿದವಾರದ್ದರಿಂದ ಸಿಎಂ ಮಾಡಿದ್ದೇ ಆದ್ರೆ ರಾಜ್ಯದ ಬಹುದೊಡ್ಡ ಸಮುದಾಯಕ್ಕೆ ಸಂದೇಶ ರವಾನಿಸಬಹುದೆಂಬ ಅಂದಾಜಿದೆ.ಇಲ್ಲವೇ ಸತೀಶ್ ಜಾರಕಿಹೊಳಿಗೆ ಪಟ್ಟ ಕಟ್ಟುವ ಬಗ್ಗೆಯೂ ಮನಸ್ಸನ್ನ ಮುಕ್ತವಾಗಿಟ್ಟುಕೊಂಡಿದೆ.ಹೀಗಾಗಿಯೇ ಪದೇ ಪದೇ ಇಬ್ಬರೂ ನಾಯಕರು ದೆಹಲಿಗೆ ಹೋಗಿ ಬರ್ತಿದ್ದಾರೆನ್ನಲಾಗ್ತಿದೆ…