ಬೆಂಗಳೂರು: ಜನರ ಹಣದಲ್ಲಿ ಸಿದ್ದರಾಮಯ್ಯ ಮಜಾ ಮಾಡುವ ಮಜಾವಾದಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಜನ ಕಷ್ಟಪಟ್ಟು ದುಡಿದು ತೆರಿಗೆ ಕಟ್ಟುವ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದುಂದುವೆಚ್ಚದಲ್ಲಿ ಉಡಾಯಿಸಿ ಮಜಾ ಮಾಡುವ ಮಜಾವಾದಿ ಎಂದು ಹೇಳಿದರು.
Diabetic patients: ಮಧುಮೇಹ ಇರುವವರು ಬ್ಲ್ಯಾಕ್ʼಬೆರಿ ತಿಂದರೆ ಏನಾಗುತ್ತದೆ ಗೊತ್ತಾ..?
ಅವರ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರು ಧರಿಸುವ ಬಟ್ಟೆ ಮತ್ತು ಶೂಗಳ ಮೇಲೆ ಟೀಕೆ ಮಾಡುತ್ತಾರೆ, ಆದರೆ ಸಿದ್ದರಾಮಯ್ಯ ಹೆಲಿಕಾಪ್ಟರ್ನಲ್ಲಿ ಹಾರಾಡುತ್ತಾ ಹಣವನ್ನು ವ್ಯಯ ಮಾಡುತ್ತಿದ್ದಾರೆ, 19 ಕೋಟಿ ರೂ. ಹಣವನ್ನು ಅವರು ಕೇವಲ ಚಾಪರ್ಗಾಗಿ ಖರ್ಚು ಮಾಡಿದ್ದಾರೆ ಎಂದು ಹೇಳಿದರು.