ಕಲುಬುರಗಿ: ವಿಧಾನಸೌಧಧಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರ ಮೇಲೆ ಕಾಂಗ್ರೆಸ್ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವಿಪಕ್ಷ ಆರ್ ಅಶೋಕ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ದೇಶದ ಭದ್ರತೆಗಾಗಿ, ಪಾಕಿಸ್ತಾನ ಘೋಷಣೆ ಕೂಗಿದವರ ಹೆಡೆಮುರಿ ಕಟ್ಟಲು ಸಿಂಹದ ರೀತಿ ಘರ್ಜನೆ ಮಾಡಿದವರು ನರೇಂದ್ರ ಮೋದಿ. ಕಾಂಗ್ರೆಸ್ನಲ್ಲಿ ಯಾವುದೇ ಅಭ್ಯರ್ಥಿಗಳು ನಿಲ್ಲಲು ರೆಡಿ ಇಲ್ಲ. ಯುದ್ಧಕ್ಕೆ ಮುನ್ನವೇ ಸೋಲನ್ನು ಒಪ್ಪಿಕೊಂಡಿದ್ದಾರೆ. ಮೋದಿಯಿಂದ ಮಾತ್ರ ಈ ದೇಶ ರಕ್ಷಣೆ ಮಾಡಲು ಸಾಧ್ಯ.
ಒಂದೇ ಒಂದು ಕಾಳು ಅಕ್ಕಿಯನ್ನೂ ಸಿದ್ದರಾಮಯ್ಯ ಕೊಟ್ಟಿಲ್ಲ, ಅದನ್ನು ಕೊಟ್ಟಿದ್ದು ನರೇಂದ್ರ ಮೋದಿ. ಅನ್ನ ಅಲ್ಲ, ಕನ್ನ ಹಾಕಲು, ಲೂಟಿ ಮಾಡಲು ಸಿದ್ದರಾಮಯ್ಯ ಬಂದಿರುವುದು. ಸಿದ್ದರಾಮಯ್ಯ ಕಾಲಿಟ್ಟಿದ್ದೇ ಇಟ್ಟಿದ್ದು, ರಾಜ್ಯದಲ್ಲಿ ಬರಗಾಲ ಉಂಡಾಗಿದೆ. ನೀರಿಲ್ಲಾ ನೀರಿಲ್ಲಾ ಎಲ್ಲೆಲ್ಲೂ ನೀರಿಲ್ಲಾ. ಹಿಂದೆಯೂ ಸಿದ್ದರಾಮಯ್ಯ ಇದ್ದಾಗ ಬರಗಾಲ ಉಂಟಾಗಿತ್ತು. ಆಮೇಲೆ ಯಡಿಯೂರಪ್ಪ ಸಿಎಂ ಆದಾಗ ಎಲ್ಲೆಲ್ಲೂ ಮಳೆಯಾಗಿತ್ತು.
ಪಿಯುಸಿ ಪಾಸಾದವರಿಗೆ ಭರ್ಜರಿ ಉದ್ಯೋಗವಕಾಶ.! ತಿಂಗಳಿಗೆ ₹63,000 ಸಂಬಳ! ಈಗಲೇ ಅರ್ಜಿ ಸಲ್ಲಿಸಿ
ಸಿದ್ದರಾಮಯ್ಯರವರೇ ನಿಮಗೆ ಆತ್ಮಸಾಕ್ಷಿ ಇದ್ದರೆ, ಅಭಿವೃದ್ಧಿಗೆ ಒಂದು ರೂಪಾಯಿ ಕೊಟ್ಟಿದ್ದೀರಾ ಹೇಳಿ? ಒಂದು ರೂಪಾಯಿ ಕೆಲಸ ಇಲ್ಲ, ಆದರೆ ಫ್ರೀ ಫ್ರೀ ಅಂತೀರಿ. ಐನೂರು ಫ್ರೀ ಕೊಡಿ, ಆದರೆ ಗಂಡನಿಂದ ಕಿತ್ತು ಹೆಂಡತಿಗೆ ಕೊಡಬೇಡಿ. ದಿನಪೂರ್ತಿ ದುಡಿದು ಸ್ವಲ್ಪ ಸಂಜೆ ಎಣ್ಣೆ ಹೊಡೆದರೆ ಅದಕ್ಕೆ 50 ರೂಪಾಯಿ ಟ್ಯಾಕ್ಸ್ ವಿಧಿಸುತ್ತಿದ್ದಾರೆ. ಕದ್ದು ಮುಚ್ಚಿ ಎಲ್ಲದಕ್ಕೂ ಟ್ಯಾಕ್ಸ್. ನನ್ನ ದುಡ್ಡು ತೆಗೆದುಕೊಂಡು ನನ್ನ ಹೆಂಡತಿಗೆ ಕೊಡಲು ನೀನು ಯಾರಯ್ಯಾ ಎಂದು ಸಿದ್ದರಾಮಯ್ಯಗೆ ಕೇಳಬೇಕು ಎಂದರು.