ಬೆಂಗಳೂರು: ಚಿಲುಮೆ ಸಂಸ್ಥೆಯನ್ನು ನೇಮಕ ಮಾಡಿಕೊಂಡಿದ್ದೇ ಸಿದ್ದರಾಮಯ್ಯ ಸರ್ಕಾರ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಚಿಲುಮೆ ಸಂಸ್ಥೆಯನ್ನು ನೇಮಕ ಮಾಡಿಕೊಂಡಿದ್ದೇ ಸಿದ್ಧರಾಮಯ್ಯ ಸರ್ಕಾರ. ಕಾಂಗ್ರೆಸ್ ಆರೋಪ ಮಾಡುವ ಮೊದಲೇ ತನಿಖೆ ನಡೆಸಲು ಬಸವರಾಜ ಬೊಮ್ಮಾಯಿ ಆದೇಶ ನೀಡಿದ್ದರು. ಇದು ತಿಳಿಯುತ್ತಿದಂತೆ ತಮ್ಮ ಬಣ್ಣ ಬಯಲಾಗುತ್ತದೆ ಎಂದು ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ನಾಟಕ ಮಾಡಿದೆ.
ಹವಾಲಾ ದಂಧೆಕೋರರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ದುರಾದೃಷ್ಟ ಎಂದು ಕಾಂಗ್ರೆಸ್ ವಿರುದ್ಧ, ಬಿಜೆಪಿ ವಾಗ್ಧಾಳಿ ನಡೆಸಿದೆ. ನಾಡುಕಟ್ಟಿದ ಕೆಂಪೇಗೌಡ ಬೇಡ ಅಂತಾರೆ, ಟಿಪ್ಪೂನ ಮೆರೆಸ್ತಾರೆ, ಶ್ರೀರಾಮಚಂದ್ರ ಯಾರು ಅಂತ ಪ್ರಶ್ನೆ ಮಾಡ್ತಾರೆ, ಏಯ್ ವಂದೇ ಮಾತರಂ ಹಾಡೋದ್ ಬೇಡಾ ಅಂತಾರೆ. ವಿಪಕ್ಷ ನಾಯಕ ಸಿದ್ಧರಾಮಯ್ಯನವರು ಬೌದ್ಧಿಕ ದಾರಿದ್ರ್ಯದಿಂದ ರಾಜಕೀಯ ಸನ್ಯಾಸತ್ವದ ಅಂಚಿನಲ್ಲಿದ್ದಾರೆ ಅನ್ನೋದಕ್ಕೆ ಅವರ ಈ ಮಾತೇ ಸಾಕ್ಷಿ ಎಂದು ಹೇಳಿದೆ.

