ಹುಬ್ಬಳ್ಳಿ: ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಆಡಳಿತಕ್ಕೆ ಬಂದ ನಂತರy ಆರ್ಥಿಕವಾಗಿ ದಿವಾಳಿ ಆಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ನಾಯಕ ಗೋವಿಂದ ಕಾರಜೋಳ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಒಂದೂ ಅಭಿವೃದ್ಧಿ ಕಾರ್ಯ ಮಾಡಲಿಲ್ಲ ಇದುವರೆಗೆ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ ಶಾಸಕರೇ ತಮ್ಮ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಚುನಾವಣೆ ಪೂರ್ವದಲ್ಲಿ ಕೊಟ್ಟ ಭರವಸೆ ಈಡೇರಿಸಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ 40 ಕ್ಕೂ ಹೆಚ್ಚು ಶಾಸಕರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದ್ದು75 ವರ್ಷದಲ್ಲಿ ಯಾವ ಸರ್ಕಾರದ ಮೇಲೂ ಈ ಮಟ್ಟದ ಪರಿಸ್ಥಿತಿ ಬಂದಿರಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಸಿದ್ದರಾಮಯ್ಯ ಅವರ ಸರ್ಕಾರದ ಮೇಲೆ ಬಂದಿದೆ

ಸಿದ್ದರಾಮಯ್ಯ ಯತೀಂದ್ರ ಅವರು ವಿಧಾನಸೌಧದ ಹೊರಗಡೆ ಸರ್ಕಾರ ನಡೆಸುತ್ತಿದ್ದಾರೆ ತಮ್ಮ ಮಗನಿಗೆ ಆಡಳಿತ ನೋಡಿಕೊಳ್ಳಲು ಹೇಳಿದ್ದಾರಂತೆ ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತ ಆಗಿದೆ. ಅಧಿಕಾರಕ್ಕೆ ಬರುವ ಮುಂಚೆ ಐದು ಗ್ಯಾರಂಟಿ ಹೇಳಿದ್ರು ಈವರೆಗೆ ಜಾರಿಯಾಗಿಲ್ಲ ಅಭಿವೃದ್ಧಿ ಕಾರ್ಯ ನಿಲ್ಲಿಸಿ ಆಡಳಿತ ನಡೆಸೋದು ಸರಿಯಲ್ಲ ಸಾಮಾಜಿಕ ಕಳಕಳಿ ಯೋಜನೆ ಜಾರಿಯಾಗಬೇಕು ಸಿಎಂ ಸಿದ್ದರಾಮಯ್ಯ ಅವರಿಗೆ ನೈತಿಕತೆ ಉಳಿದಿಲ್ಲ ನಮ್ಮ ಸರ್ಕಾರದ ಬಗ್ಗೆ ಸುಳ್ಳು ಆರೋಪ ಮಾಡಿದ್ದರು
40% ಆರೋಪ ಬಹಿರಂಗ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ ಈಗ ಐದು ಗ್ಯಾರಂಟಿಗಳನ್ನ ನಂಬಿ ಜನರು ಮೋಸ ಹೋಗಿದ್ದಾರೆ. ಸಿದ್ಧರಾಮಯ್ಯ ಅವರೇ ವಿಧಾನಸೌಧದಿಂದ ಆಡಳಿತ ಮಾಡಿಹಾದಿಬೀದಿಯಲ್ಲಿ ಸಂತೆ ಮಾಡುತ್ತಾ ಆಡಳಿತ ನಡೆಸೋದು ಸರಿಯಲ್ಲ. ಸ್ವಾತಂತ್ರ್ಯ ಬಂದ ನಂತರ ಈ ಮಟ್ಟದ ಕೆಟ್ಟ ಸರ್ಕಾರ ಯಾವಾಗಲೂ ಬಂದಿಲ್ಲ ಕಾರಣ
ಸಿದ್ದರಾಮಯ್ಯ ಆತ್ಮಸಾಕ್ಷಿಯಾಗಿ ಆಡಳಿತ ಮಾಡಲಿ ಅಧಿವೇಶನ ಪ್ರಾರಂಭ ಆಗಲಿ ಅದಕ್ಕೆ ಉತ್ತರ ನೀಡುತ್ತೇವೆ ಎಂದರು.

