ಚಿಕ್ಕಮಗಳೂರು:- ಕುಮಾರಸ್ವಾಮಿ ಜತೆ ಸಿದ್ದರಾಮಯ್ಯ ಅವರೂ ಮಾಲೆ ಹಾಕಿ ಬರಲಿ ಶಾಸಕ ಸಿ.ಟಿ.ರವಿ ಮನವಿ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ದತ್ತಪೀಠಕ್ಕೆ ಮಾಲೆ ಧರಿಸಿ ಬರಲಿ. ಹಿಂದೂ ಎಂದು ಹೇಳಿಕೊಳ್ಳಲು ಗರ್ವಪಡಬೇಕು. ಸಮಾಜ ಕೂಡ ಅದನ್ನೇ ನಿರೀಕ್ಷೆ ಮಾಡುತ್ತದೆ.
ಕುಮಾರಸ್ವಾಮಿ ಅವರ ಹೇಳಿಕೆ ಸಿದ್ದರಾಮಯ್ಯ ಅವರಿಗೆ ಮಾದರಿ’ ಎಂದು ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದರು.
‘ನಾನು ಹಿಂದೂ ಅಲ್ವಾ, ನನ್ನ ಹೆಸರಲ್ಲೆ ಸಿದ್ದರಾಮ ಇದ್ದಾನೆ ಎಂದಿದ್ದೀರಿ. ಮಾಲೆ ಹಾಕಿ ಬನ್ನಿ, ನೀವು ಬಂದರೆ ಸಚಿವ ಜಮೀರ್ ಕೂಡ ಮಾಲೆ ಹಾಕೇ ಹಾಕುತ್ತಾರೆ. ಐದು ದಶಕಗಳ ಸತ್ಯದ ಹೋರಾಟಕ್ಕೆ ಬಲ ಬರಲಿದೆ’ ಎಂದರು.
‘ಹಿಂದುತ್ವದ ವಿಚಾರ ಬಂದಾಗ ಹಿಂದೆ ನೋಡಲೇಬಾರದು, ಮುಂದಕ್ಕೆ ನೋಡಬೇಕು. ನಮ್ಮ ಧರ್ಮದ ಪ್ರಕಾರ ನಡೆದುಕೊಳ್ಳಲು ಯಾರಿಗೂ ಹೆದರಬೇಕಿಲ್ಲ. ಚುನಾವಣೆ ಸಮಯಕ್ಕೆ ಹಿಂದೂಗಳಾಗಬಾರದು, ಜೀವನ ಪರ್ಯಂತ ಹಿಂದೂ ಆಗಿ ಇರಬೇಕು’ ಎಂದು ಹೇಳಿದರು.