ಚಿಕ್ಕಮಗಳೂರು:- ನನ್ನ ಒಡನಾಡಿಗಳನ್ನು ಸಿದ್ದರಾಮಯ್ಯ ಮಂತ್ರಿ ಮಾಡಲಿಲ್ಲ ಎಂದು ಹೇಳುವ ಮೂಲಕ ಹಿಂದಿನ ಘಟನೆಯನ್ನು ದೇವೇಗೌಡರು ಮೆಲುಕು ಹಾಕಿದ್ದಾರೆ.
ನನ್ನ ಒಡನಾಡಿಗಳನ್ನು ಸಿದ್ದರಾಮಯ್ಯ ಮಂತ್ರಿ ಮಾಡಲಿಲ್ಲ. ಈ ಮಾತನ್ನು, ಇವತ್ತು ಹೇಳುತ್ತೇನೆ ನಾಳೆಯೂ ಹೇಳುತ್ತೇನೆ. ಸಿದ್ದರಾಮಯ್ಯನನ್ನೇ ಕೇಳಿ ಎಂದು ಅವರು ಕಿಡಿಕಾರಿದ್ದಾರೆ
ಸಿದ್ದರಾಮಯ್ಯ ಮೋಸ ಮಾಡುತ್ತಾರೆ. ಮಂತ್ರಿ ಮಾಡಬೇಡ ಎಂದು ಹೆಗಡೆಯವರು ಹೇಳಿದ್ದರು. ಈ ವಿಚಾರಕ್ಕೆ ಹೆಗಡೆ ಮತ್ತು ನನಗೂ ಹೋರಾಟ ಆಯಿತು. ವಾಲ್ಮೀಕಿ ಸಮುದಾಯದ ತಿಪ್ಪೇಸ್ವಾಮಿ ಅವರನ್ನು ಮಂತ್ರಿ ಮಾಡುವಂತೆ ಮನೆಯ ಒಳಗೆ ಕೂರಿಸಿಕೊಂಡು ನನಗೆ ಹೇಳಿದ್ದರು. ಹಿಂದುಳಿದ ವರ್ಗದವರನ್ನೇ ಮಾಡುವುದಾದರೆ ತಿಪ್ಪೇಸ್ವಾಮಿ ಮಾಡು, ಸಿದ್ದರಾಮಯ್ಯನ ಮಾಡಬೇಡ ಎಂದಿದ್ದರು. ನಾನು ಸುಳ್ಳನ್ನು ಹೇಳಿ ಪಾಪದ ಕೆಲಸ ಮಾಡುವುದಿಲ್ಲ. ನನಗೆ ಮಂಡಿ ನೋವಿದೆ. ಆದರೆ ಜ್ಞಾಪಕ ಶಕ್ತಿ ಹಾಗೆ ಉಳಿದಿದೆ ಎಂದಿದ್ದಾರೆ.
ಮೋದಿ ದೇಶದ ಸರ್ವೋಚ್ಚ ನಾಯಕ. ಅವರ ಸಮಾನವಾಗಿ ಯಾವ ನಾಯಕರು ದೇಶದಲ್ಲಿ ಇಲ್ಲ. ಎನ್ಡಿಎ ಕೂಟದಲ್ಲಿ ಮೋದಿ ಸಮಕ್ಕೆ ಯಾರು ಇಲ್ಲ. ಒಂದೊಂದು ಚಾನೆಲ್ನಲ್ಲಿ ಒಂದೊಂದು ಸಮೀಕ್ಷೆ ಬರುತ್ತಿದೆ. ಇದಕ್ಕೆಲ್ಲ ಯಾರು ತಲೆಕೆಡಿಸಿಕೊಳ್ಳಬೇಕಿಲ್ಲ. ಮೋದಿ ಮತ್ತೆ ಈ ದೇಶದ ಪ್ರಧಾನಿಯಾಗುತ್ತಾರೆ. ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದಾರೆ. ಹಿಂದೆಯೇ ಕುಮಾರಸ್ವಾಮಿ ಸಾಲ ಮನ್ನಾ ಮಾಡಿದ್ದರು. 26 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ. ಹಾಸನ ಕ್ಷೇತ್ರದ ಜನರು ನನ್ನ ಗೆಲ್ಲಿಸಿದ್ದಾರೆ ಅವರ ಋಣ ತೀರಿಸಬೇಕು ಎಂದಿದ್ದಾರೆ.