ಧಾರವಾಡ: ಧಾರವಾಡ ಬೆಂಗಳೂರು ಇಂಟರ್ ಸಿಟಿ ಸಿದ್ಧಗಂಗಾ ಎಕ್ಸ್ಪ್ರೆಸ್ ಈ ಹಿಂದೆ ಆರಂಭವಾದಗಿನಿಂದ ಡಿಸೇಲ್ ಇಂಜಿನ್ದಿಂದ ಓಡಾಟ ನಡೆಸಿಕೊಂಡು ಬಂದಿದ್ದು, ಈಗ ಕಳೆದ ಶುಕ್ರವಾರದಿಂದ ವಿದ್ಯುತ್ ಚಾಲಿತ ಟ್ರೈನ ಆಗಿ ಪರಿವರ್ತನೆಗೊಂಡಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ಧಾರವಾಡ ಬೆಂಗಳೂರು ಸಿದ್ಧಗಂಗಾ ಇಂಟರ್ ಸಿಟಿ ರೈಲು ಸಂಪೂರ್ಣ ವಿದ್ಯುತ್ ಚಾಲಿತ ಇಂಜಿನ ಟ್ರೈನ್ ಆಗಿದ್ದು,
ಇನ್ಮುಂದೆ ಈ ಹಿಂದಿನಂತೆ ತನ್ನ ಕಾರ್ಯವನ್ನು ಮುಂದುವರೆಸುವುದಾಗಿ ಹೇಳಿ ಸಂತೋಷ ಹಂಚಿಕೊಂಡಿದ್ದಾರೆ. ಧಾರವಾಡ-ಬೆಂಗಳೂರು ರೈಲ್ವೇ ಲೈನನ್ನು 100% ವಿದ್ಯುದೀಕರಣ ಗೊಳಿಸಿದ ಈ ಹಿನ್ನೆಲೆಯಲ್ಲಿ, ಕೇಂದ್ರ ರೈಲ್ವೇ ಸಚಿವರಿಗೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಧನ್ಯವಾದ ತಿಳಿಸಿದ್ದಾರೆ.