ಬೆಂಗಳೂರು:– ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅನುಮತಿ ಪಡೆದು ಶ್ರೀ ರಾಮನ ಕಟೌಟ್ ಹಾಕಿದ್ದರೂ ಪೊಲೀಸರಿಂದ FIR ದಾಖಲು ಮಾಡಲಾಗಿದೆ.
ಶಿವನಗರ ಯುವಕರ ಸಂಘದಿಂದ ಬೆಸ್ಕಾಂಗೆ ಹಣ ಪಾವತಿಸಿ, ಅನುಮತಿ ಪಡೆದು ಕಾರ್ಡ್ ರಸ್ತೆಯ ವಾರಿಯರ್ ಬೇಕರಿ ಬಳಿ ಬೃಹತ್ ಕಟೌಟ್ ಅಳವಡಿಸಲಾಗಿದೆ. ರಾಜಾಜಿನಗರ ಪೊಲೀಸರ ನಡೆಗೆ ಶಿವನಗರ ಯುವಕರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದಾರೆ
ರಾಜ್ಯದ ಜಿಲ್ಲೆ ಜಿಲ್ಲೆಯಲ್ಲೂ ರಾಮಜಪ ನಡೆಯುತ್ತಿದೆ. ಇದರ ನಡುವೆ ಕೋಲಾರದಲ್ಲಿ ಕಿಡಿಗೇಡಿಗಳು ಶ್ರೀರಾಮನ ಫ್ಲೆಕ್ಸ್ ಹರಿದು ಶಾಂತಿ ಕದಡುವ ಪ್ರಯತ್ನ ಮಾಡಿದ್ದರು. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲೂ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಸಂಕ್ರಾಂತಿ ಸಂಬಂಧ ಶುಭ ಕೋರಿ ಫ್ಲೆೇಕ್ಸ್ ಅಳವಡಿಸಲಾಗಿತ್ತು.