ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ ಅತ್ಯಂತ ಜನಪ್ರಿಯ ಡಿಜಿಟಲ್ ಪಾವತಿ ವಿಧಾನಗಳಲ್ಲಿ ಒಂದಾಗಿದೆ. ಇದು ದೇಶದಲ್ಲಿ ಆನ್ಲೈನ್ ವಹಿವಾಟುಗಳನ್ನು ಹೆಚ್ಚು ಸುಲಭಗೊಳಿಸಿದೆ. ಭಾರತದ ಹೆಚ್ಚಿನ ಯುವ ಜನಾಂಗ ಇದನ್ನೇ ಅನುಸರಿಸುತ್ತಿದ್ದಾರೆ. ನೀವು ಗೂಗಲ್ ಪೇ ಅಥವ ಫೋನ್ ಪೇಯಂತಹ ಮೊಬೈಲ್ ವಾಲೆಟ್ ಆಪ್ಗಳನ್ನು ಉಪಯೋಗ ಮಾಡುತ್ತಿದ್ದರೆ ಐದು ನಿಮಿಷ ಬಿಡುವು ಮಾಡಿಕೊಂಡು ಇದನ್ನ ಓದಿ.
ಅಮೃತಸರದ ಗೋಲ್ಡನ್ ಟೆಂಪಲ್ ನಲ್ಲಿ ಅಪರಿಚಿತ ವ್ಯಕ್ತಿಯಿಂದ ರಾಡ್ನಿಂದ ಹಲ್ಲೆ
ಮಾರುಕಟ್ಟೆಯಲ್ಲಿ ನಾನಾ ತರಹದ ಉಂಗುರಗಳು ಬಂದಿವೆ. ಅದರ ಸಾಲಿಗೆ ಸ್ಮಾರ್ಟ್ ಉಂಗುರಗಳು ಸೇರಿವೆ.
ಚಿನ್ನ, ಬೆಳ್ಳಿ, ಲೋಹದ ಉಂಗುರವನ್ನು ತೊಡುವವರಿದ್ದಾರೆ. ಆದರೀಗ ಸ್ಮಾರ್ಟ್ ಉಂಗುರಗಳು ಸಹ ಮಾರುಕಟ್ಟೆಗೆ ಧಾವಿಸಿದೆ. ಇವು ಸುಲಭವಾಗಿ ನಗದು ರಹಿತ ಪಾವತಿಯವನ್ನು ಮಾಡುವ ಕಾರ್ಯವನ್ನು ಮಾಡುತ್ತಿವೆ.
ಸ್ಮಾರ್ಟ್ ರಿಂಗ್ಗಳು ಯಾವುದೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳಿಲ್ಲದೆ ಮತ್ತು ಫೋನ್ಪೇ, ಪೇಟಿಯಂ ಅಗತ್ಯವಿಲ್ಲದೆ ನಗದು ರಹಿತ ವ್ಯವಹಾರ ಮಾಡಲು ಸಾಧ್ಯವಾಗುತ್ತದೆ. ಅಚ್ಚರಿ ಸಂಗತಿ ಎಂದರೆ ಸ್ಮಾರ್ಟ್ರಿಂಗ್ ಅನ್ನು ಹಾಂಗ್ ಕಾಂಗ್ ಮೂಲಕ ಟೋಪಿ ಎಂಬ ಕಂಪನಿ ಅಭಿವೃದ್ಧಿಪಡಿಸಿದ್ದು, ಇದು ವೈರ್ಲೆಸ್ ಪೇಮೆಂಟ್ ಚಿಪ್ಗಳನ್ನು ಒಳಗೊಂಡಿದೆ.
ಸ್ಮಾರ್ಟ್ ರಿಂಗ್ ಫೋನ್ ಅಪ್ಲಿಕೇಶನ್ ಮೂಲಕ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್ ರಿಂಗ್ ಬಳಕೆದಾರರು ಆಯಾ ಆ್ಯಪ್ಗಳ ಮೂಲಕ ಬ್ಯಾಂಕ್ ಖಾತೆಯನ್ನ ಲಿಂಕ್ ಮಾಡಬೇಕು. ಇದರ ಅನ್ವಯ ಸ್ಮಾರ್ಟ್ ರಿಂಗ್ ಕಾರ್ಯ ನಿರ್ವಹಿಸುತ್ತದೆ.
ಮತ್ತೊಂದು ಅಚ್ಚರಿ ಸಂಗತಿ ಎಂದರೆ ಟೋಪಿ ಕಂಪನಿ ತಯಾರಿಸಿರುವ ಈ ಸ್ಮಾರ್ಟ್ರಿಂಗ್ ಅನ್ನು ಚಾರ್ಜ್ ಮಾಡಬೇಕಿದೆ. ಇದನ್ನು ಶಾಪಿಂಗ್ ಮಾಲ್ಗಳಲ್ಲಿರುವ ಪೇಮೆಂಟ್ ಯಂತ್ರದ ಬಳಿ ತೋರಿಸಿದಂತೆಯೇ ನಗದು ರಹಿತ ಪಾವತಿ ಮಾಡುತ್ತದೆ.
ಸದ್ಯ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿರುವ ಸ್ಮಾರ್ಟ್ರಿಂಗ್ ಗ್ರಾಹಕರ ಮನಸೆಳೆದಿದೆ. ಭಾರತದಲ್ಲೂ ಎಲೆಕ್ಟ್ರಾನಿಕ್ಸ್ ಸ್ಮಾರ್ಟ್ಅಪ್ ಎಂಬ ಕಂಪನಿ ಸೆವೆನ್ 7 ರಿಂಗ್ ಎಂಬ ಸ್ಮಾರ್ಟ್ರಿಂಗ್ ಪರಿಚಯಿಸಿದೆ.