ಕಾಂಡೋಮ್, ಲೂಬ್ರಿಕೆಂಟ್ ಬಳಸಿದರೆ ಕ್ಯಾನ್ಸರ್ ಬರುತ್ತದೆ ಎಂದು ಅಧ್ಯಯನ ವರದಿಯಲ್ಲಿ ಆಘಾತಕಾರಿ ಸಂಗತಿ ಬಯಲಾಗಿದೆ.
ಮೂಡನಂಬಿಕೆ ಇನ್ನೂ ಜೀವಂತ: ಸತ್ತ ಮಹಿಳೆ ಬದುಕಿ ಬರಲಿ ಎಂದು ಗಂಗಾ ನದಿಗೆ ಶವ ತೇಲಿಸಿ ಬಿಟ್ಟ ಜನ!
ಲೂಬ್ರಿಕೆಂಟ್ಗಳಲ್ಲಿ ಬಂಜೆತನ, ಕ್ಯಾನ್ಸರ್ ಸೇರಿದಂತೆ ಇತರ ಸಮಸ್ಯೆಗಳಿಗೆ ಕಾರಣವಾಗುವ ವಿಷಕಾರಿ ರಾಸಾಯನಿಕಗಳನ್ನು ಹೊಂದಿರುತ್ತವೆ ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ.
ಕಾಂಡೋಮ್ಗಳು ಮತ್ತು ಲೂಬ್ರಿಕೆಂಟ್ಗಳ ಹಲವಾರು ಪ್ರಸಿದ್ಧ ಬ್ರಾಂಡ್ಗಳಲ್ಲಿ ಈ ವಿಷಕಾರಿ ಪಿಎಫ್ಎಎಸ್ ರಾಸಾಯನಿಕಗಳ ಅಪಾಯಕಾರಿ ಮಟ್ಟಲ್ಲಿದೆ ಎಂಬುದನ್ನು ಇತ್ತೀಚಿನ ಅಧ್ಯಯನವು ಬಹಿರಂಗಪಡಿಸಿದೆ. ಗ್ರಾಹಕ ನ್ಯಾಯವಾದಿ ಸಂಸ್ಥೆಯಾದ ಮಾಮಾವೇಶನ್ ನಡೆಸಿದ ಸಂಶೋಧನೆಯು ಈ ಉತ್ಪನ್ನಗಳಿಗೆ ಸಂಬಂಧಿಸಿದ ಗಮನಾರ್ಹ ಆರೋಗ್ಯ ಅಪಾಯಗಳನ್ನು ಬಹಿರಂಗಪಡಿಸಿದೆ. ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯ ಪ್ರಯೋಗಾಲಯವು ನಡೆಸಿದ ಅಧ್ಯಯನವು ಟ್ರೋಜನ್ ಅಲ್ಟ್ರಾ ಥಿನ್ ಕಾಂಡೋಮ್ಗಳು ಮತ್ತು ಕೆ-ವೈ ಜೆಲ್ಲಿ ಕ್ಲಾಸಿಕ್ ವಾಟರ್ ಬೇಸಡ್ ಫರ್ಸನಲ್ ಲೂಬ್ರಿಕೆಂಟ್ ಸೇರಿದಂತೆ ವಿವಿಧ ಸಂತಾನೋತ್ಪತ್ತಿಗೆ ಸಂಬಂಧಿಸಿದ ಆರೋಗ್ಯ ಉತ್ಪನ್ನಗಳಲ್ಲಿ ಪಿಎಫ್ಎಎಸ್ ಅನ್ನು ಪತ್ತೆ ಮಾಡಿದೆ
ಟ್ರೋಜನ್ ಅಲ್ಟ್ರಾ ಥಿನ್ ಕಾಂಡೋಮ್ಗಳು ಮತ್ತು ಯೂನಿಯನ್ ಸ್ಟ್ಯಾಂಡರ್ಡ್ ಅಲ್ಟ್ರಾ ಥಿನ್ ಲೂಬ್ರಿಕೇಟೆಡ್ ಮೇಲ್ ಲ್ಯಾಟೆಕ್ಸ್ ಕಾಂಡೋಮ್ಗಳಲ್ಲಿ ಪಿಎಫ್ಎಎಸ್ ಮಟ್ಟವು ವಿಶೇಷವಾಗಿ ಹೆಚ್ಚಾಗಿದೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಇತರ ಲೂಬ್ರಿಕೆಂಟ್ಗಳಾದ ಲೋಲಾ ಟಿಂಗ್ ಲಿಂಗ್ ಮಿಂಟ್ ಪ್ಲೆಷರ್ ಜೆಲ್ ಸಹ ಈ ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿವೆ ಎನ್ನಲಾಗಿದೆ
ಪಿಎಫ್ಎಎಸ್ ಎಂಬುದು ನೀರು, ಕಲೆಗಳು ಮತ್ತು ಶಾಖ ನಿರೋಧಕ ಉತ್ಪನ್ನಗಳನ್ನು ತಯಾರಿಸಲು ಬಳಸುವ ಸುಮಾರು 15,000 ಸಂಶ್ಲೇಷಿತ ರಾಸಾಯನಿಕಗಳ ಗುಂಪು. ಅವುಗಳನ್ನು “ಫಾರೇವರ್ ಕೆಮಿಕಲ್ಸ್” ಎಂದು ಕರೆಯಲಾಗುತ್ತದೆ. ಏಕೆಂದರೆ ಅವು ಪರಿಸರದಲ್ಲಿ ನೈಸರ್ಗಿಕವಾಗಿ ಕರಗುವುದಿಲ್ಲ ಮತ್ತು ಮಾನವ ದೇಹದಲ್ಲಿ ಸಂಗ್ರಹವಾಗುವಂತಹ ರಾಸಾಯನಿಕವಾಗಿದೆ. ಹಾಗಾಗಿ ಪಿಎಫ್ಎಎಸ್ ಅನ್ನು ಹೆಚ್ಚು ಬಳಸುವುದರಿಂದ ಕ್ಯಾನ್ಸರ್, ಯಕೃತ್ತಿನ ಹಾನಿ, ಥೈರಾಯ್ಡ್ ಸಮಸ್ಯೆಗಳು, ಜನನ ದೋಷಗಳು ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಬಹುದು. ಅಲ್ಲದೇ ಇಂತಹ ಕಾಂಡೋಮ್ಗಳು ಮತ್ತು ಲೂಬ್ರಿಕೆಂಟ್ಗಳನ್ನು ಶಿಶ್ನ ಮತ್ತು ಯೋನಿಯಂತಹ ತುಂಬಾ ಸೂಕ್ಷ್ಮ ಪ್ರದೇಶಗಳಿಗೆ ಬಳಸುವುದರಿಂದ ಹೆಚ್ಚು ಆತಂಕಕಾರಿಯಾಗಿದೆ. ಯಾಕೆಂದರೆ ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಅವು ರಾಸಾಯನಿಕಗಳನ್ನು ಸುಲಭವಾಗಿ ಹೀರಿಕೊಳ್ಳಬಲ್ಲವು. ಅಲ್ಲದೇ ಈ ರಾಸಾಯನಿಕಗಳ ಕಾಂಡೋಮ್ ಬಳಕೆ ಮಾಡುವುದರಿಂದ ಸ್ತ್ರೀ ಸಂತಾನೋತ್ಪತ್ತಿಯ ನಾಳವು ಹಾನಿಗೊಳಗಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.