ಬೆಂಗಳೂರು:- ರಾಜಧಾನಿ ಬೆಂಗಳೂರಿನ ಮನೆ ಮಾಲೀಕರಿಗೆ ಶಾಕ್ ಎದುರಾಗಿದ್ದು, ಬಾಡಿಗೆ ದರದಲ್ಲಿ ದಿಢೀರ್ ಕುಸಿತ ಕಂಡಿದೆ.
ಬೆಂಗಳೂರು ನಗರ ಅಷ್ಟು ಸುಲಭವಾಗಿ ಮನೆ ಬಾಡಿಗೆ ಸಿಗುವಂತೆ ಮಾಡಲ್ಲ. ಯಾಕಂದ್ರೆ ಬೆಂಗಳೂರಿನಲ್ಲಿ ಈಗ ಮನೆ ಬಾಡಿಗೆಗೆ ಪಡೆಯಲು ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಮತ್ತೊಂದು ಕಡೆ, ಲಕ್ಷಾಂತರ ರೂಪಾಯಿ ಅಡ್ವಾನ್ಸ್ ಅಂದ್ರೆ ಮುಂಗಡ ಕೊಟ್ಟು ಜನರು ಮನೆ ಬಾಡಿಗೆಗೆ ಪಡೆಯುತ್ತಿದ್ದಾರೆ. ಹೀಗಿದ್ದಾಗ ದಿಢೀರ್ ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ಭಾರಿ ಕುಸಿತ ಕಂಡಿದೆ. ಅದರಲ್ಲೂ ಬೆಂಗಳೂರಿನ ಐಟಿ ಕಾರಿಡಾರ್ ಭಾಗದಲ್ಲೇ ಮನೆಗಳನ್ನು ಜನ ಖಾಲಿ ಮಾಡುತ್ತಿದ್ದಾರೆ!
ಬಿಕಿನಿ ಧರಿಸಿ ಬಸ್ ನಲ್ಲಿ ಮಹಿಳೆ ಪ್ರಯಾಣ: ಪುರುಷ ಪ್ರಯಾಣಿಕರ ಜೊತೆ ಅಸಭ್ಯ ವರ್ತನೆ!
ಹೌದು, ಇದಕ್ಕೆಲ್ಲಾ ಕಾರಣ ಆಗಿರುವುದು ಬೆಂಗಳೂರಿನ ನೀರಿನ ಸಮಸ್ಯೆ. ಬೆಂಗಳೂರಿನಲ್ಲಿ ಸರಿಯಾಗಿ ಮಳೆ ಬೀಳದ ಕಾರಣಕ್ಕೆ ನೀರು ಸಿಗುತ್ತಿಲ್ಲ. ಒಂದು ಕಡೆ ಕಾವೇರಿ ನೀರಿಗೆ ಕೂಡ ಸಮಸ್ಯೆ ಎದುರಾಗಿದ್ದು, ಮತ್ತೊಂದು ಕಡೆ ಬೋರ್ವೆಲ್ ನೀರು ಕೂಡ ಬತ್ತಿ ಹೋಗುತ್ತಿದೆ. ಅದರಲ್ಲೂ ಬೆಂಗಳೂರಿನ ಬಹುತೇಕ ಅಪಾರ್ಟ್ಮೆಂಟ್ ಜನರು ನೀರು ಇಲ್ಲದೆ ಪರದಾಡಿ, ನರಳಾಡುತ್ತಿದ್ದಾರೆ. ಬೆಂಗಳೂರಿನ ಬಹುತೇಕ ಅಪಾರ್ಟ್ಮೆಂಟ್ ಜನರು ನೀರಿಗಾಗಿ ಬೋರ್ ನಂಬಿ ಕೂತಿದ್ದಾರೆ. ಆದರೆ ಈಗಿನ ಸ್ಥಿತಿಯಲ್ಲಿ ಮಳೆ ಬಾರದೆ ಬೋರ್ವೆಲ್ ಬತ್ತಿದ್ದು ಜನರು ನೀರು ಇಲ್ಲದೆ ಮನೆ ತೊರೆಯುತ್ತಿದ್ದಾರೆ.
ಕೊರೊನಾ ಬಳಿಕ ಮತ್ತೆ ಎಲ್ಲ ಮಾಮೂಲಿ ಸ್ಥಿತಿಗೆ ಬಂದಿದೆ ಬೆಂಗಳೂರಲ್ಲಿ ಪರಿಸ್ಥಿತಿ ಬದಲಾಗಿದೆ ಇಷ್ಟು ದಿನ ಖಾಲಿ ಇದ್ದ ಮನೆಗಳಿಗೆ ಈಗ ಭರ್ಜರಿ ಡಿಮ್ಯಾಂಡ್ ಕೂಡ ಬಂದಿತ್ತು. ‘ಕೊರೊನಾ’ ಬಂದಾಗ 5-10 ಸಾವಿರದ ಒಳಗೆ ಇದ್ದ ಮನೆ ಬಾಡಿಗೆ ಈಗ ಮತ್ತೆ ಮುಗಿಲು ಮುಟ್ಟಿತ್ತು. ಜನರಿಗೆ ಅಪಾರ್ಟ್ಮೆಂಟ್ & ಫ್ಲಾಟ್ಗಳಲ್ಲಿ ಮನೆ ಬಾಡಿಗೆಗೆ ಪಡೆಯುವುದೆ ದೊಡ್ಡ ಚಾಲೆಂಜಿಂಗ್ ಕೂಡ ಆಗಿತ್ತು. ಆದರೆ ಇದೀಗ, ದಿಢೀರ್ ನೀರಿನ ಕೊರತೆ ಎದುರಾದ ಕಾರಣಕ್ಕೆ ಮತ್ತೊಮ್ಮೆ ಮನೆ ಬಾಡಿಗೆ ದರ ಕುಡಿತ ಕಾಣುತ್ತಿದೆ.
ಬೆಂಗಳೂರಿನ ಕೇಂದ್ರ ಭಾಗದಲ್ಲಿ ಅಪಾರ್ಟ್ಮೆಂಟ್ನ ಫ್ಲಾಟ್ ಬಾಡಿಗೆ ದೊಡ್ಡ ಮಟ್ಟದಲ್ಲಿಯೇ ಇರುತ್ತೆ. ಬೆಂಗಳೂರು ಕೇಂದ್ರ ಪ್ರದೇಶ ಅಂದ್ರೆ ಫ್ರೇಜರ್ ಟೌನ್, ಬಾಣಸವಾಡಿ, ಲಿಂಗರಾಜಪುರ ಕಾಕ್ಸ್ಟೌನ್ ಸೇರಿದಂತೆ ಸಿಲಿಕಾನ್ ಸಿಟಿ ಬೆಂಗಳೂರು ಕೇಂದ್ರ ಭಾಗದಲ್ಲಿ 2 ಬಿಎಚ್ಕೆ ಫ್ಲಾಟ್ಗಳು 20,000 ರಿಂದ ಸುಮಾರು 35,000 ತನಕ ಬಾಡಿಗೆ ಇತ್ತು. ಹಾಗೆಯೇ 3 ಬಿಎಚ್ಕೆ ಫ್ಲಾಟ್ಗಳು ಬಾಡಿಗೆಗೆ 40,000 ದಿಂದ 50,000 ತನಕ ಇದ್ದವು. ಆದರೆ ಈಗ ದಿಢೀರ್ ಮನೆ ಬಾಡಿಗೆಯ ದರ ಬಿದ್ದು ಹೋಗಿದೆ. ಸುಮಾರು ಶೇಕಡಾ 20 ರಷ್ಟು ಬಾಡಿಗೆ ಕುಸಿದಿದೆ ಎನ್ನಲಾಗಿದೆ. ಅಲ್ಲದೆ ಈ ಪರಿಸ್ಥಿತಿ ಹೀಗೆ ಮುಂದುವರಿದು, ನೀರು ಸಿಗದೇ ಇದ್ದರೆ ಮತ್ತಷ್ಟು ಜನರು ಬೆಂಗಳೂರಿಂದ, ತಮ್ಮ ಮನೆ ಬದಲಾಯಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬೆಂಗಳೂರು ದಕ್ಷಿಣ ಭಾಗದಲ್ಲಿ ಅಭಿವೃದ್ಧಿ ವೇಗವಾಗಿ ಸಾಗುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು ದಕ್ಷಿಣ ಪ್ರದೇಶದಲ್ಲಿ 2 ಬಿಎಚ್ಕೆ ಫ್ಲಾಟ್ಗಳು, 25,000 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮಾರಾಟ ಆಗುತ್ತಿದ್ದವು. 3 ಬಿಎಚ್ಕೆ ಫ್ಲಾಟ್ಗಳ ಬಾಡಿಗೆ ಕೂಡ, 30,000 ರೂ. ಮೇಲೆ ಇತ್ತು. ಈ ಸಮಯದಲ್ಲೇ ನೀರಿನ ಕೊರತೆ ಪರಿಣಾಮ, ಬೆಂಗಳೂರು ದಕ್ಷಿಣ ಭಾಗದಲ್ಲೂ ಬಾಡಿಗೆ ರೇಟ್ ಕುಸಿದು ಬಿದ್ದಿದೆ ಎನ್ನಲಾಗಿದೆ