ರಾಮ್ ಚರಣ್ ಈಗ ಟಾಲಿವುಡ್‌ನ ಬಿಝಿ ನಟ. ‘ಆರ್‌ಆರ್‌ಆರ್’ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಅಷ್ಟರಲ್ಲೇ, 100 ಕೋಟಿ ರೂಪಾಯಿ ಸಂಭಾವನೆ ಕೊಡುತ್ತೇವೆ, ನೀವು ನಮ್ಮ ಸಿನಿಮಾದಲ್ಲಿ ನಟಿಸಿ ಎಂದು ನಿರ್ಮಾಪಕರೊಬ್ಬರು 100 ಕೋಟಿ ರೂಪಾಯಿಯ ಚೆಕ್ ಕೊಟ್ಟಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಹರಡಿದೆ.ರಾಮ್ ಚರಣ್ ಮಾರ್ಕೆಟ್ ಈಗ ವಿಸ್ತಾರಗೊಂಡಿದೆ.
‘ಆರ್‌ಆರ್‌ಆರ್’ ಸಿನಿಮಾ ಹಿಂದಿಯಲ್ಲೂ ಬಿಡುಗಡೆಯಾಗುತ್ತಿದೆ. ಎಂದಿರನ್, ಅನ್ನಿಯನ್ ಖ್ಯಾತಿಯ ಶಂಕರ್ ನಿದೇಶನದ ‘ಆರ್ ಸಿ 15’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ರಾಮ್ ಚರಣ್ ವಿಶಿಷ್ಟ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಕೂಡ ಪ್ಯಾನ್ ಇಂಡಿಯಾ ಚಿತ್ರವಾಗಲಿದೆ. ರಾಮ್ ಚರಣ್ ತನ್ನ ತಂದೆ ಜತೆ ‘ಆಚಾರ್ಯ’ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಚಿತ್ರ ಜನವರಿಯಲ್ಲಿ ತೆರೆಕಾಣಲಿದೆ.

ಇದನ್ನೂ ಮೆಗಾ ಬಜೆಟ್ ಸಿನಿಮಾ ಎಂದು ಹೇಳಲಾಗುತ್ತಿದೆ. ನಂತರ ಗೌತಮ್ ತಿನ್ವಾರಿ ನಿದೇಶನದ ಚಿತ್ರದಲ್ಲೂ ನಟಿಸಲು ರಾಮ್ ಚರಣ್ ಡೇಟ್ ಕೊಟ್ಟಿದ್ದಾರೆ. ಈ ಎಲ್ಲಾ ಚಿತ್ರಗಳು ಈಗ ಪ್ಯಾನ್ ಇಂಡಿಯಾ ಹಣೆಪಟ್ಟಿ ಪಡೆದುಕೊಂಡಿವೆ. ಹಾಗಾಗಿ ರಾಮ್ ಚರಣ್ ಮಾರ್ಕೆಟ್ ಈಗ ವಿಸ್ತಾರಗೊಂಡಿದೆ ಎಂದು ಟಾಲಿವುಡ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.