ಚಾಮರಾಜನಗರ: ಕ್ಯಾನ್ಸರ್ ನಿಂದ ಮುಕ್ತರಾಗಿರುವ ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಈಗ ಫುಲ್ ಆಕ್ಟಿವ್ ಆಗಿದ್ದಾರೆ. 131 ಸಿನಿಮಾ ಶೂಟಿಂಗ್ ಗೆ ಬ್ರೇಕ್ ಹಾಕಿ ಪತ್ನಿ ಗೀತಾ ಶಿವರಾಜ್ ಕುಮಾರ್ ಒಟ್ಟಿಗೆ ತಂದೆ ಹುಟ್ಟೂರು ಗಡಿಭಾಗದ ಚಾಮರಾಜನಗರ ಗಾಜನೂರಿನಲ್ಲಿನಲ್ಲಿ ಬೀಡುಬಿಟ್ಟಿದ್ದಾರೆ. ಅಣ್ಣಾವ್ರ ಸೋದರತ್ತೆ ನಾಗಮ್ಮ ಜೊತೆ ಶಿವಣ್ಣ ಹಾಗೂ ಗೀತಾಕ್ಕ ಕಾಲಕಳೆಯುತ್ತಿದ್ದಾರೆ.
ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಬಂದ ಬಳಿಕ ಶಿವಣ್ಣ ಕೆಲ ತಿಂಗಳು ರೆಸ್ಟ್ ಮೂಡ್ ನಲ್ಲಿದ್ದರು. ವಿಶ್ರಾಂತಿಗೆ ವಿರಾಮ ಹಾಕಿ ಕಳೆದ ವಾರಷ್ಟೇ 131 ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ಗ್ಯಾಪ್ ನಲ್ಲಿಯೇ ರಾಮ್ ಚರಣ್ ಹಾಗೂ ಚುಚ್ಚಿ ಬಾಬು ಹೊಸ ಸಿನಿಮಾದ ಲುಕ್ ಟೆಸ್ಟ್ ನಲ್ಲಿಯೂ ಶಿವಣ್ಣ ಪಾಲ್ಗೊಂಡಿದ್ದರು. ಬ್ಯಾಕ್ ಟು ಬ್ಯಾಕ್ ಕೆಲಸದ ನಡುವೆಯೇ ಹ್ಯಾಟ್ರಿಕ್ ಹೀರೋ ಕುಟುಂಬಕ್ಕೂ ಸಮಯ ಕೊಡುತ್ತಾರೆ. ಅದರಂತೆ ಇಂದು ನಾಗಮ್ಮ ಅವರ ಆರೋಗ್ಯ ವಿಚಾರಿಸಲು ಗಾಜನೂರಿಗೆ ಭೇಟಿ ಕೊಟ್ಟಿದ್ದಾರೆ.