ಸೌರಾಷ್ಟ್ರ ಸುಂದರಂ ಸೋಮನಾಥೇಶ್ವರಂ.. ಭಾರತದಲ್ಲಿರುವ 11 ಜ್ಯೋರ್ತಿಲಿಂಗಗಳ ಪೈಕಿ ಸೋಮನಾಥದ ಜ್ಯೋತಿರ್ಲಿಂಗವೂ ಮೊದಲನೆಯದು.. ಗುಜರಾತ್ನ ಪ್ರಶಾಂತ ಕರಾವಳಿಯುದ್ದಕ್ಕೂ ನೆಲೆಸಿರೋ ಸೋಮನಾ ದೇಗುಲ ಹಿಂದೂಗಳ ಪವಿತ್ರ ಯಾತ್ರಾ ಸ್ಥಳವೂ ಹೌದು.. ಈ ದೇಗುಲದ ಪರಂಪರೆ ಐತಿಹಾಸಿಕ ಮತ್ತು ಪೌರಾಣಿಕತೆಯಿಂದ ರೋಚಕತೆಯ ಸೃಷ್ಟಿಸಿದೆ.. ಆದರೆ ಇದೀಗ ಸೋಮನಾಥದಲ್ಲಿ ಗಾಳಿಯಲ್ಲಿ ತೇಲುವ ಶಿವಲಿಂಗವಿತ್ತಂತೆ.. ಸಾವಿರಾರು ವರ್ಷಗಳ ಹಿಂದೆ ದಾಳಿಗೊಳಗಾಗಿ ಆ ಶಿವಲಿಂಗ ಛಿದ್ರವಾಗಿದ್ದ ಭಗ್ನಾವಶೇಷಗಳು ಪತ್ತೆಯಾಗಿವೆ.
ಭಾರತದ ಮೇಲೆ ಶತಮಾನಗಳ ಕಾಲ ನಿರಂತರವಾಗಿ ನಡೆದ ದಾಳಿಗಳಲ್ಲಿ ಭಾರತದ ಕಲೆ, ಸಂಸ್ಕೃತಿ, ಜ್ಞಾನ ಸಂಪತ್ತು.. ಹೀಗೆ ಪ್ರತಿಯೊಂದು ಕೂಡ ನಾಶಗೊಂಡಿದ್ವು ಅನ್ನೋದು ನಮಗೆ ಗೊತ್ತಿದೆ. ಅದರಲ್ಲೂ ಇಸ್ಮಾಮಿಕ್ ದಾಳಿಗಳಲ್ಲಿ ಭಾರತದ ಭೌತಿಕ ಸಂಪತ್ತು ನಾಶವಾದರೆ, ಬ್ರಿಟಿಷರ, ಯುರೋಪಿಯನ್ನರ್ ದಾಳಿಗಳೂ ನಮ್ಮ ಅಂತಸತ್ವವನ್ನು, ಮನಂಬಿಕೆಯನ್ನು ನಾಶ ಮಾಡಿತು.. ಇಂತಹ ದಾಳಿಗಳಿಲ್ಲೀ ಭಾರತವೂ ಎಂದು ಮರೆಯಲಾಗದಂತ ದಾಳಿ ಘಜ್ನಿಯ ದೊರೆ ಮಹಮ್ಮದ್ ಘಜ್ನಿಯ ದಾಳಿ.. ಈ ಒಂದಲ್ಲಾಎರಡಲ್ಲಾ 17 ಬಾರಿ ದಂಡೆತ್ತಿ ಬಂದಿದ್ದ ಈ ಘಜ್ನಿ ನಮ್ಮ ಧಾರ್ಮಿಕ ಸಂಪತ್ತನೇ ಧ್ವಂಸಗೈದಿದ್ದ.. ಇದೇ ಘಜ್ನಿಯ ದಾಳಿಗೆ ಪವಿತ್ರ ಸ್ಥಳ ಸೋಮನಾಥಪುರ ದೇಗುಲಕ್ಕೆ ಹಾನಿ ಮಾಡಿದ್ದಲ್ಲದೇ , ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದಿದ್ದ..
ಈ ಘಜ್ನಿಯು ಸೋಮನಾಥ ದೇಗುಲದ ಮೇಲೆ ದಾಳಿ ಮಾಡಿದ್ದ ಹಿಂದಿನ ವಿಚಾರ ಕೇಳಿದ್ರೆ ಅಚ್ಚರಿ ಅನ್ಸುತ್ತೆ.. ಹೌದು, ಭಾರತದಲ್ಲಿರೋ ಸೋಮನಾಥ ದೇಗಲು ಸುಂದರವಾಗಿದೆ ಅಂತಾ ಘಜ್ನಿಗೆ ಯಾರೋ ಹೇಳಿದ್ರೆಂತೆ.. ಸೋಮನಾಥದ ಅರ್ಥ ಕೇಳಿದಾಗ ಆತನ ಆಸ್ಥಾನದ ವಿದ್ವಾಂಸರು ಸೋಮ ಎಂದರೆ ಚಂದಿರ…ನಾಥ ಎಂದರೆ ಮಾಲೀಕ ಅನ್ನಲು, ಚಂದ್ರನೇ ನಮಗೆ ಮಾಲೀಕ ಅವನಿಗೆ ಮತ್ತೊಬ್ಬ ಮಾಲೀಕ ಇರಬಾರದು ಎಂದು ಸೋಮನಾಥ ದೇಗುಲದ ಮೇಲೆ ದಾಳಿ ಮಾಡಿದ್ದನಂತೆ ಈ ಘಜ್ನಿ.. ಸೋಮನಾಥ ದೇಗಲುದ ರಕ್ಷಣೆಗಾಗಿ ಅಲ್ಲಿ ನೆತ್ತರೇ ಹರಿದಿತ್ತು.. ಭಾರತೀಯ ಸೈನಿಕರು ಹೋರಾಡಿ ಪ್ರಾಣ ಬಿಟ್ಟಿದ್ದರು.. ಹೀಗೆ ಭಾರತೀಯ ಸೈನಿಕರ ವಿರುದ್ದ ಹೋರಾಡಿ ದೇಗುಲದ ಒಳಗೆ ಹೋದ ಘಜ್ನಿಗೆ ಒಂದು ಅಚ್ಚರಿ ಕಾದಿತ್ತು. ಅದುವೇ ಅಲ್ಲಿನ ತೇಲುವ ಶಿವಲಿಂಗ ಹೌದು.. ಶಿವಲಿಂಗ ಭೂಮಿಯಿಂದ ಐದಡಿ ಮೇಲೆ ತೇಲುತ್ತಿತಂತೆ.. ಅದನ್ನು ಎತ್ತ ಎಳೆದರೂ ಮತ್ತೆ ಅದೇ ಸ್ಥಳದಲ್ಲಿ ಹೋಗಿ ನಿಲ್ತಿತಂತೆ.. ಇದನ್ನು ಕಂಡ ಘಜ್ನಿ ಅದನ್ನು ಭಗ್ನಗೊಳಿಸಿ, ಅದರ ಕೆಲವೊಂದು ಅವಶೇಷಗಳ ಹೊತ್ತೊಯ್ದು, ತನ್ನ ಆಸ್ಥಾನಕ್ಕೆ ಮೆಟ್ಟಿಲು ಮಾಡಿಸಿದ್ದನಂತೆ..
ಇನ್ನೂ ಉಳಿದಿದ್ದ ಕೆಲವೊಂದು ಭಗ್ನಾವಶೇಷಗಳನ್ನು ಬ್ರಾಹ್ಮಣರು ನಾಗುಸಾಧುಗಳು ಸಂತರು ಕೊಂಡಯ್ದರಂತೆ.. ಇನ್ನು ಅರಸರೊಬ್ಬರು ಆ ಶಿವಲಿಂಗ ಛಿದ್ರಗಳನ್ನೇ ಬಳಸಿ ಬೇರೆ ಕಡೆ ಜ್ಯೋರ್ತಿಲಿಂಗಗಳನ್ನು ಸ್ಥಾಪಿಸಿದರಂತೆ.. ಇದಲ್ಲದೇ ಇನ್ನು ಭಗ್ನಾವಶೇಷಗಳು ಕೂಡ ಸಾಧುಗಳು ಸಂರಕ್ಷಿಸಿಕೊಂಡು ಬಂದಿದ್ದು, ಇದೇ ಲಿಂಗಗ ಭಗ್ನಾವಶೇಷಗಳನ್ನು ಈದೀಗ ಅರ್ಚಕ ಸೀತಾರಾಮ್ ಶಾಸ್ತ್ರಿ ಎಂಬವರು ಆರ್ಟ್ ಆಫ್ ಲೀವಿಂಗ್ ನ ಶ್ರೀ ಶ್ರೀ ರವಿಶಂಕರ್ ಅವರಿಗೆ ನೀಡಿದ್ದಾರೆ.
ಪ್ರಸ್ತುತ ತಲೆಮಾರಿನ ಅರ್ಚಕರಲ್ಲಿ ಕಳೆದ 21 ವರ್ಷಗಳಿಂದಲೂ ಲಿಂಗದ ಪಾಲಕರಾಗಿದ್ದಾರೆ ಸೀತಾರಾಮ್ ಶಾಸ್ತ್ರಿ, ಇದನ್ನು ಅವರಿಗೆ ಅವರ ಮಾವ ನೀಡಿದ್ದು, ಅವರಿಗೆ ಅವರ ಗುರುಗಳು ನೀಡಿದ್ದರು.. ಹೀಗೆ ಗುರು ಪರಂಪರೆಯಿಂದಲೂ ಕಾಪಾಡಿಕೊಂಡು ಬರಲಾಗಿದ್ಯಂತೆ ಈ ಭಗ್ನಾವಶೇಷಗಳನ್ನು. 1924 ರಲ್ಲಿ ಆಗಿನ ಶಂಕರಾಚಾರ್ಯರು ಶಿವಲಿಂಗದ ಭಗ್ನಾವಶೇಷಗನಳನ್ನು ಸಂರಕ್ಷಿಸಿದ ಕುಟುಂಬಕ್ಕೆ 100 ವರ್ಷಗಳ ಕಾಲ ಅದನ್ನು ಮರೆಮಾಡಲು ಮತ್ತು ಅದರ ಪೂಜೆಯನ್ನು ಮುಂದುವರಿಸಲು ಸೂಚಿಸಿದರಂತೆ. ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಬಳಿಕ ಇದನ್ನು ಸೋ{ಮನಾಥ ದೇಗುಲಕ್ಕೆ ನೀಡುವಂತೆ ಸೂಚಿಸಿದ್ದರು ಎಂಬುದು ಸೀತಾರಾಮ ಶಾಸ್ತ್ರೀಗಳ ಮಾತು..
ಇಲ್ಲಿ ಅಯಸ್ಕಾಂತ ಶಿವಲಿಂಗದ ನಿರ್ಮಾಣದ ಬಗ್ಗೆ ಮಾತಾಡುವಾಗ ನಮ್ಮ ಪೂರ್ವಜರ ಲೋಹಶಾಸ್ತ್ರದ ಮೇರು ಎಷ್ಟಿತ್ತು ಅನ್ನೋದನ್ನು ನಾವು ಗಮನಿಸಬೇಕು.. ಈ ದೇಗುಲದ ಮೇಲ್ಛಾವಣಿ ಮೇಲೆ ಆಯಸ್ಕಾಂತದ ಲೇಪನವಿದ್ಯಂತೆ. ಕೆಳಗೆ ಆಯಸ್ಕಾಂತ ಲೇಪನದ ಒಂದು ಚಿನ್ನದ ಬೋಳಾಕಾರದ ಪ್ಲೇಟ್ ಇಟ್ಟಿದ್ದು, ಇದರ ಮೇಲೆ ಶಿವಲಿಂಗವನ್ನು ಪ್ರತಿಷ್ಟಾಪಿಸಿದ್ದು, ಇದರಿಂದಾಗಿ ಇದು ಆ ಬೋಳಾಕಾರದ ಪ್ಲೇಟ್ನಿಂದ ಎರಡು ಅಡಿ ಮೇಲೆ ಗಾಳಿಯಲ್ಲಿ ತೇಲುವಂತ್ತಿತ್ತು.. ಒಟ್ನಲ್ಲಿ ಸಾವಿರಾರು ವರ್ಷಗಳ ಹಿಂದೆ ಘಜ್ನಿ ದಾಳಿಗೆ ಒಳಗಾಗಿದ್ದ ಸೋಮನಾಥ ದೇಗಲುದ ಆಯಸ್ಕಾಂತ ಶಿವಲಿಂಗದ ಭಗ್ನಾವಶೇಷಗಳು ಪತ್ತೆಯಾಗಿದ್ದು, ಭಾರೀ ಕುತೂಹಲ ಮೂಡಿಸಿದೆ.